top of page

ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

  • Writer: Ananthamurthy m Hegde
    Ananthamurthy m Hegde
  • Dec 28, 2024
  • 1 min read
ree

ತಿರುಪತಿ ಎಂದಾಕ್ಷಣ ನೆನಪಾಗೋದು ಅಲ್ಲಿನ ಪ್ರಮುಖ ಪ್ರಸಾದವಾದ ಲಡ್ಡು. ವೆಂಕಟರಮಣ ಸ್ವಾಮಿಯ ಸೇವೆ ಮಾಡಿಸುವ ಭಕ್ತಾಧಿಗಳು ಈ ಲಡ್ಡು ಪ್ರಸಾದವನ್ನು ಮರೆಯದೇ ತೆಗೆದುಕೊಳ್ಳೋದು ಸಾಮಾನ್ಯ ಸಂಗತಿ. ತಿರುಪತಿ ಲಡ್ಡನ್ನು ಮಾಡುವ ಪ್ರಕ್ರಿಯೆಯನ್ನು ನೋಡಲು ಸಿಗೋದು ಅಪರೂಪವೇ. ಪುತ್ತೂರಿನಲ್ಲಿ ಡಿ.28, 29 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಹಿನ್ನಲೆಯಲ್ಲಿ ಪುತ್ತೂರಿನಲ್ಲೇ ತಿರುಪತಿ ಲಡ್ಡನ್ನು ತಯಾರಿ ಮಾಡಲು ನಿರ್ಧರಿಸಿದ್ದಾರೆ .

ಶ್ರೀನಿವಾಸ ಸ್ವಾಮಿಯ ಈ ಕಲ್ಯಾಣೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸುವ ಹಿನ್ನಲೆಯಲ್ಲಿ ಭಕ್ತರಿಗೆ ನೀಡಲು ಸಾವಿರಾರು ಸಂಖ್ಯೆಯ ತಿರುಪತಿ ಲಡ್ಡುಗಳ ತಯಾರಿ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಎರಡನೇ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಪುತ್ತಿಲ ಪರಿವಾರ ಟ್ರಸ್ಟ್ ಮೂಲಕ ಪುತ್ತೂರಿನಲ್ಲಿ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ಡಿ.28 ಮತ್ತು 29 ರಂದು ಕಾರ್ಯಕ್ರಮ ನಡೆಯಲಿದೆ . ಆಯೋಜಕರ ಪ್ರಕಾರ್ ಈ ಬಾರಿ ಸುಮಾರು 30 ರಿಂದ 40 ಸಾವಿರ ಭಕ್ತಾಧಿಗಳು ಭಾಗವಹಿಸಲಿದ್ದಾರೆ . ತಿರುಪತಿ ವೆಂಕಟರಮಣ ದೇವರ ಪ್ರಮುಖ ಪ್ರಸಾದವಾದ ಲಡ್ಡುಗಳ ತಯಾರಿಕೆಯನ್ನು ಪುತ್ತೂರಿನಲ್ಲೇ ತಯಾರಿಸಿ ಭಕ್ತರಿಗೆ ಹಂಚಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ತಿರುಪತಿ ತಿರುಮಲ ಕ್ಷೇತ್ರಕ್ಕೆ ಸಂಬಂಧಪಟ್ಟ ತಂಡ ಈ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಿಕೊಡುತ್ತಿದ್ದು, ಇದೇ ತಂಡಕ್ಕೆ ಸಂಬಂಧಪಟ್ಟ ಅಡುಗೆ ಭಟ್ಟರು ಈ ಲಡ್ಡುಗಳನ್ನು ತಯಾರಿಸಲು ಆರಂಭಿಸಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಾಕಶಾಲೆಯಲ್ಲೇ ಈ ಲಡ್ಡುಗಳ ತಯಾರಿ ಪ್ರಕ್ರಿಯೆ ಆರಂಭಗೊಂಡಿದ್ದು, ತಿರುಪತಿ ತಿರುಮಲದಲ್ಲಿ ಯಾವ ರೀತಿಯಲ್ಲಿ ಲಡ್ಡು ತಯಾರಿಸಲಾಗುತ್ತದೋ, ಅದೇ ರೀತಿಯಲ್ಲಿ ಈ ಲಡ್ಡುಗಳನ್ನು ಇಲ್ಲಿಯೂ ತಯಾರಿಸಲಾಗುತ್ತಿದೆ. ತಿರುಪತಿಯಲ್ಲಿ ಲಡ್ಡು ತಯಾರಿಕೆ ಸಂದರ್ಭದಲ್ಲಿ ಬಳಸುವ ಎಲ್ಲಾ ವಸ್ತುಗಳನ್ನು ಇಲ್ಲಿ ತಯಾರಿಸುವ ಲಡ್ಡಿನಲ್ಲೂ ಹಾಕಲಾಗುತ್ತಿದ್ದು, ತಿರುಮಲದಲ್ಲಿ ಸಿಗುವ ಲಡ್ಡಿನ ಅದೇ ಸ್ವಾದ ಈ ಲಡ್ಡಿನಲ್ಲೂ ಇರಲಿದೆ. ಸುಮಾರು ನಾಲ್ಕರಿಂದ ಐದು ಅಡಿಗೆ ಭಟ್ಟರು ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಅಂದಾಜು ಮೂವತ್ತು ಸಾವಿರ ಲಡ್ಡುಗಳನ್ನು ತಯಾರಿಸಿದ್ದು, ಈ ಲಡ್ಡುಗಳನ್ನು ಲಡ್ಡು ಪ್ರಸಾದ ಸೇವೆ ಮಾಡಿಸಿದ ಭಕ್ತಾಧಿಗಳಿಗೆ ಹಂಚಲಾಗುತ್ತದೆ.




Comments


Top Stories

bottom of page