ಪಾರ್ಟಿ ಮಾಡಿದ್ರೆ ಹೋಟೆಲ್‌ಗೆ ನುಗ್ಗಿ ಹೊಡೆಯುತ್ತೇವೆ; ಪ್ರಮೋದ್ ಮುತಾಲಿಕ್
- Ananthamurthy m Hegde
- Dec 29, 2024
- 1 min read

ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಇವೆ. ಬಹುತೇಕ ಜನರು 2025 ನ್ನು ಬರ ಮಾಡಿಕೊಳ್ಳಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಡಿಸೆಂಬರ್ 31 ರಂದು ದೇಶದ ಹಲವು ಭಾಗಗಳಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಇದಕ್ಕಾಗಿ ಬೀಚ್ ಬದಿಗಳಲ್ಲಿ, ಹೋಟೆಲ್, ಬಾರ್‌ಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಇದೀಗ ಹೊಸ ವರ್ಷ ಸೆಲೆಬ್ರೇಟ್ ಮಾಡುವವರಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಾಗಲಕೋಟೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಬಾರಿಯಂತೆ ಈ ವರ್ಷವೂ ಹಿಂದೂ ಸಂಘಟನೆ ಹೊಸ ವರ್ಷಾಚರಣೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಇದೀಗ ಈ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಕುಡಿದು ಕುಪ್ಪಳಸಿ, ಡ್ರಗ್ಸ್, ರೇಪ್, ಅಶ್ಲೀಲವಾಗಿ ಆಚರಣೆ ಮಾಡುವವರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಹೊಸ ವರ್ಷಾಚರಣೆಗೆ ಮಾಡುವವರ ಬಗ್ಗೆ ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಂದು ಸಂಪ್ರದಾಯ ಸಂಸ್ಕೃತಿ, ಧರ್ಮದ ಪ್ರಕಾರ, ವೈಜ್ಞಾನಿಕ ಹಾಗೂ ಪಂಚಾಂಗದ ಪ್ರಕಾರ ನಮಗೆ ಯುಗಾದಿ ಹೊಸ ವರ್ಷ. ಆದ್ರೆ ಬ್ರಿಟಿಷರು, ಕ್ರಿಶ್ಚಿಯನ್ಸ್ ಹಾಕಿದ ಈ ಪರಂಪರೆ ಜನವರಿ 1 ಹೊಸ ವರ್ಷ ಅನ್ನೋದು ಅವೈಜ್ಞಾನಿಕ. ಆದರೆ ನಮಗೆ ಯುಗಾದಿ ಹೊಸವರ್ಷ. ಆದ್ದರಿಂದ ಈ ರೀತಿಯ ಪಾರ್ಟಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರ ನಿಧನದಿಂದ ಈಗ ದೇಶದಲ್ಲಿ 7 ದಿದ ಶೋಕಾಚರಣೆ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ, ಇಡೀ ಕರ್ನಾಕದಲ್ಲಾಗಲಿ, ದೇಶದಲ್ಲಿ ಹೇಗೆ ಹೊಸ ವರ್ಷಾಚರಣೆ ಮಾಡ್ತೀರಿ? ಆದ್ದರಿಂದ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಪಾರ್ಟಿ ಮಾಡಿದ್ರೆ ಹೋಟೆಲ್‌ಗೆ ನುಗ್ಗಿ ಹೊಡೆಯುತ್ತೇವೆ; ಪ್ರಮೋದ್ ಮುತಾಲಿಕ್
ಡಿಸೆಂಬರ್ 31, ಜನವರಿ 1 ರಂದು ಮಾಡುವಂತಹ ಪಾರ್ಟಿ, ಕಾರ್ಯಕ್ರಮಗಳು ಅವೈಜ್ಞಾನಿಕ. ಈ ರೀತಿಯ ಕಾರ್ಯಕ್ರಮಗಳು ಯುವಕರನ್ನು ದಾರಿತಪ್ಪಿಸುತ್ತಿದೆ. ಡ್ರಗ್ ಮಾಫಿಯಾದಲ್ಲಿ ಸಿಕ್ಕಿಸಿ, ಮಹಿಳೆಯರನ್ನ ಅಸಭ್ಯವಾಗಿ ನಡೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳೇ ಕಾರಣ. ಆದ್ದರಿಂದ ಡಿ. 31 ರಂದು ರಾತ್ರಿ ಎಲ್ಲೆಲ್ಲಿ ಆಚರಣೆ ಮಾಡ್ತಾರೆ ಅಲ್ಲೆಲ್ಲ ಹೋರಾಟ ಮಾಡ್ತೇವೆ. ಮೈಸೂರಲ್ಲಿ ಈಗಾಗಲೇ ಹೊಸ ವರ್ಷಾಚರಣೆ ರದ್ದು ಮಾಡಿದ್ದಾರೆ.ಇದು ಇಡೀ ರಾಜ್ಯದಲ್ಲಿ ಅನ್ವಯ ಮಾಡಬೇಕು. ಡಿ. 30, 31 ರಂದು ಬಾರ್ ಬಂದ್ ಮಾಡಬೇಕು. ಇದರಿಂದಲ್ಲೇ ಈ ರೀತಿಯ ಘಟನೆಗಳು ನಡೆಯುತ್ತಿರೋದು. ಇಲ್ಲವಾದರೆ ಇಂತಹ ಹೋಟೆಲ್‌ಗೆ ನುಗ್ಗಿ ಹೊಡೆಯುತ್ತೇವೆ. ಇಡೀ ರಾಜ್ಯದಲ್ಲಿ ಶ್ರೀರಾಮ ಸೇನೆ ಸಂಘಟನೆ ಮತ್ತು ಇತರ ಎಲ್ಲಾ ಹಿಂದೂ ಸಂಘಟನೆಗಳು ಇದಕ್ಕೆ ವಿರುದ್ಧವಾಗಿ ಪ್ರತಿಭಟನೆ ನಡೆಸೋದು ಗ್ಯಾರಂಟಿ ಎಂದು ಹೇಳಿದ್ದಾರೆ.















Comments