top of page

ಪ್ರಕೃತಿ ವಿಕೋಪದ ಅನಾಹುತಕ್ಕೆ ತಕ್ಷಣ ಸ್ಪಂದಿಸುತ್ತೇನೆ : ಶಾಸಕ ಭೀಮಣ್ಣ

  • Writer: Ananthamurthy m Hegde
    Ananthamurthy m Hegde
  • Jul 8
  • 1 min read

ಸಿದ್ದಾಪುರ: ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಮ್ಮ ರಾಜ್ಯದ ಉಸ್ತುವಾರಿಯಾಗಿರುವಂತಹ ಸುರ್ಜೆವಾಲಾರವರು ಅವರು ನಮ್ಮೆಲ್ಲ ಶಾಸಕರನ್ನು ವೈಯಕ್ತಿಕವಾಗಿ ಕರೆದು ಮಾತನಾಡುತ್ತಿದ್ದಾರೆ. ಹಾಗೆ ನನಗೆ ನಾಳೆ ಸಮಯ ಕೊಟ್ಟಿದ್ದಾರೆ. ನಾನು ಆ ಸಂದರ್ಭದಲ್ಲಿ ಹೋಗಿ ನನ್ನ ಕ್ಷೇತ್ರದ ಬಗ್ಗೆ ಇರಬಹುದು ಅಭಿವೃದ್ಧಿ ಕುರಿತು ಸೇರಿದಂತೆ ಬೇರೆ ಬೇರೆ ವಿಷಯಗಳನ್ನು ಮಾತನಾಡಲು ಮುಕ್ತವಾಗಿ ಅವಕಾಶ ಕೊಟ್ಟಿದ್ದಾರೆ. ನಾನು ಭೇಟಿಯ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬೇಕಾಗಿರುವಂತಹ ಕಾಮಗಾರಿಗಳ ಹಾಗೂ ಅನುದಾನದ ಹಣದ ಬಗ್ಗೆ ಈಗಾಗಲೇ ಎಲ್ಲಾ ಮಂತ್ರಿಗಳಿಗೂ ಮನವಿ ಕೊಟ್ಟಿದ್ದೇನೆ. ಅದಕ್ಕೆ ಪುರಸ್ಕಾರ ಸಿಗುವ ರೀತಿಯಲ್ಲಿ ಮಾತನಾಡುತ್ತೇನೆ. ಇನ್ನೊಂದು ಕಡೆ ಪಕ್ಷದ ಸಂಘಟನೆ ಎಲ್ಲಾ ಚೆನ್ನಾಗಿದೆ ಏನು ತೊಂದರೆ ಇಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ್ ಹೇಳಿದರು. ಅವರು ಸಿದ್ದಾಪುರದಲ್ಲಿ ಸೋಮವಾರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.

ಮುಖ್ಯಮಂತ್ರಿಗಳ ಬದಲಾವಣೆ ಹೈಕಮಾಂಡಿಗೆ ಬಿಟ್ಟ ವಿಚಾರ ಅದು ನನ್ನ ವಿಚಾರ ಅಲ್ಲ ಎಂದರು.

ಪ್ರಕೃತಿ ವಿಕೋಪ ಹಾನಿಗೆ ಸಂಬಂಧಿಸಿದಂತೆ ಎರಡು ತಹಶೀಲ್ದಾರ್ ಗಳ ಸಂಪರ್ಕದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ನಾನು ಇದ್ದೇನೆ ಎಲ್ಲೆಲ್ಲಿ ಅನಾಹುತ ಆಗುತ್ತದೆಯೋ ತಕ್ಷಣ ನನ್ನ ಗಮನಕ್ಕೆ ವಿಷಯವನ್ನು ತರಬೇಕು ಎಂದು ಹೇಳಿದ್ದೇನೆ. ಇ.ಓ ರವರು ಕೂಡ ಪಿಡಿಒಗಳ ಮುಖಾಂತರ ಮಾಹಿತಿ ಬಂದ ತಕ್ಷಣ ಸ್ಪಂದಿಸುತ್ತಿದ್ದಾರೆ. ನಿಮ್ಮ ಪತ್ರಿಕೆ ಅವರ ಮುಖಾಂತರ ಕೂಡ ಯಾವುದೇ ರೀತಿಯ ಪ್ರಕೃತಿ ವಿಕೋಪದ ಮಾಹಿತಿ ಬಂದರೆ ನಾನು ಅಲ್ಲಿಗೆ ಕೂಡ ಹೋಗಿ ಸ್ಪಂದಿಸುತ್ತೇನೆ ಎಂದ ಅವರು ಅರಣ್ಯ ಅತಿಕ್ರಮಣ ತೆರವುಗೊಳಿಸುತ್ತಿರುವ ಸಮಸ್ಯೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಈಗಾಗಲೇ ಮಾನವೀಯ ದೃಷ್ಟಿಯಿಂದ ವರ್ತಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಜನರು ಕೂಡ ಕಾನೂನು ತಿಳಿದು ಸಹಕರಿಸಬೇಕು ಎಂದರು.

Comments


Top Stories

bottom of page