ಪೋಲೀಸ್ ಕಾರಿಗೆ ಲಾರಿ ಢಿಕ್ಕಿ : ಹೆಡ್ ಕಾನ್‌ಸ್ಟೇಬಲ್‌ಗೆ ಗಾಯ
- Ananthamurthy m Hegde
- Oct 30, 2024
- 1 min read
ಕಾರವಾರ: ಆರೋಪಿಯನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಪೊಲೀಸರಿದ್ದ ಇನ್ನೋವಾ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಜೊಯಿಡಾ ರಾಮನಗರದಲ್ಲಿ ನಡೆದಿದೆ.
ಗೋವಾದಿಂದ ಆರೋಪಿಯೋರ್ವನ್ನು ಬಂಧಿಸಿ ಇನ್ನೋವಾ ಕಾರಿನಲ್ಲಿ ಕರೆ ತರುತ್ತಿದ್ದ ಹಳಿಯಾಳ ಪೊಲೀಸರು ಬಾರ್ಡರ್ ದಾಟಿ ರಾಮನಗರ ತಲುಪುತ್ತಿದ್ದಂತೆ ರಾಂಗ್ ಸೈಡ್‌ನಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಳಿಯಾಳ ಠಾಣಾ ಹೆಡ್ ಕಾನ್ಸ್ಸ್ಟೇಬಲ್ ಎಂ.ಎಂ ಮುಲ್ಲಾಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಳಿಯಾಳ ಕ್ರೈಂ ಪಿಎಸ್‌ಐ ಅಮೀನ್ ಅತ್ತಾರ್, ಆರೋಪಿ ಹಾಗೂ ಇತರ 4-5 ಪೊಲೀಸ್ ಸಿಬ್ಬಂದಿಗೆ ಹಳಿಯಾಳದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಜೊಯಿಡಾ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿಕ್ಕಿ ಹೊಡೆದ ಲಾರಿ ಸೀಝ್ ಮಾಡಿ ಚಾಲಕನನ್ನು ಬಂಧಿಸಲಾಗಿದೆ.
Comments