top of page

ಪುಷ್ಪ೨ ಮೊದಲ ದಿನ ೨೯೪ ಕೋಟಿ ಗಳಿಕೆ

  • Writer: Ananthamurthy m Hegde
    Ananthamurthy m Hegde
  • Dec 7, 2024
  • 1 min read


ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. 

ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ 'ಪುಷ್ಪ: ದಿ ರೈಸ್' ಚಿತ್ರದ ಭರ್ಜರಿ ಯಶಸ್ಸಿನ ನಂತರ, ಈ ಚಿತ್ರದ ಎರಡನೇ ಭಾಗ ತೆರೆಕಂಡಿದೆ. ಮೊದಲ ಭಾಗ 350 ಕೋಟಿ ರೂ. ಗಳಿಸಿದರೆ, ಎರಡನೇ ಭಾಗ ಡಿಸೆಂಬರ್ 5 ಬಿಡುಗಡೆಯಾಗಿದೆ. 

ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಬಂಡಾರಿ, ಜಗಪತಿ ಬಾಬು, ಸುನಿಲ್, ಅನಸೂಯಾ ಭಾರದ್ವಾಜ್, ರಾವ್ ರಮೇಶ್, ಸತ್ಯ, ಅಜಯ್ ಮುಂತಾದ ದೊಡ್ಡ ತಾರಾಗಣವೇ ಇದೆ.

ಮೊದಲ ಭಾಗಕ್ಕಿಂತ ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣವಾದ 'ಪುಷ್ಪ 2', ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಗೆದ್ದಿದೆ. ಪುಷ್ಪ 2 ತೆರೆ ಕಂಡ ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. 

ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳಿನಲ್ಲೂ ಸುಮಾರು 7 ಕೋಟಿ ಗಳಿಸಿದ ಈ ಚಿತ್ರ, ಹಿಂದಿಯಲ್ಲಿ 73 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ. ಪ್ರೀ-ಬುಕಿಂಗ್‌ನಲ್ಲಿ 100 ಕೋಟಿ ಗಳಿಸಿದ ಈ ಚಿತ್ರದ ಅಧಿಕೃತ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. 

ಮೊದಲ ದಿನವೇ 'ಪುಷ್ಪ 2' ವಿಶ್ವಾದ್ಯಂತ 294 ಕೋಟಿ ರೂ. ಗಳಿಸಿದೆ. ಈ ಐತಿಹಾಸಿಕ ಗೆಲುವನ್ನು ಚಿತ್ರತಂಡ ಆಚರಿಸುತ್ತಿದೆ. ಈ ವೇಗದಲ್ಲೇ ಎರಡು ದಿನಗಳಲ್ಲಿ 500 ಕೋಟಿ ರೂ. ತಲುಪಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆ.


Comments


Top Stories

bottom of page