top of page

ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ

  • Writer: Ananthamurthy m Hegde
    Ananthamurthy m Hegde
  • Jul 2
  • 1 min read
ree

ಶಿರಸಿ : ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಿದೆ. ಸಮಕಾಲೀನ ಪತ್ರಿಕೋದ್ಯಮದಲ್ಲಿ ಉತ್ತರ ಕನ್ನಡ ಜಿಲ್ಲೆಯಷ್ಟು ಪತ್ರಕರ್ತರು ಹಾಗೆ ಉತ್ತರಕನ್ನಡ ಜಿಲ್ಲೆಯಿಂದ ಬರುವಷ್ಟುಗುಣಮಟ್ಟದ ಪತ್ರಕರ್ತರು ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ರಾಜ್ಯ ಮಟ್ಟದ

ಎಲ್ಲಾ ಪತ್ರಿಕೆಗಳ ಮುಖ್ಯ ಸ್ಥಾನದಲ್ಲಿ ಉತ್ತರ ಕನ್ನಡದವರೇ ಇದ್ದಾರೆ. ಇದಕ್ಕೆ ಕಾರಣ ಇಲ್ಲಿಯ ನೆಲ, ಜಲ ಹಾಗೇ ಇಲ್ಲಿನ ಜನಸಮುದಾಯ ಪತ್ರಕರ್ತರನ್ನು ಹುಟ್ಟು ಹಾಕಿದೆ ಎಂದು ಸಂಯುಕ್ತ ಕರ್ಣಾಟಕ ಸಂಪಾದಕ ಮಹಾಬಲ ಸೀತಾಳಭಾವಿ ಹೇಳಿದರು. ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗು ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರ ಒಳ್ಳೇಯ ದಿನಗಳು ಮುಗಿದು ಹೋಗಿವೆ. ಕನ್ನಡ ಪತ್ರಿಕೋದ್ಯಮದ ಸುವರ್ಣ ಯುಗ ಸಹ ಮುಗಿದುಹೋಗಿದೆ. ಈಗಿರುವ ಒಳ್ಳೆಯದನ್ನು ಎಷ್ಟು ದಿನ ಉಳಿಸಿಕೊಳ್ಳಬಹುದು ಎಂದು ಯೋಚಿಸುವ ದಿನ ಬಂದಿದೆ. ಇನ್ನೂ ೧೦ ತಿಂದ ೧೫ ವರ್ಷಗಳ ವರೆಗೆ ಪತ್ರಿಕೆಗಳು ಇರಬಹದು. ಪತ್ರಿಕೆಗಳಿಗಿಂತ ಮೊದಲು ಟಿವಿ ಚಾನಲ್ ಗಳು ಬಾಗಿಲು ಹಾಕುವ ಪರಿಸ್ಥಿತಿ ಬರುತ್ತದೆ. ಮೊಬೈಲ್ ನಲ್ಲಿಯೇ ಪತ್ರಿಕೆ, ನ್ಯೂಸ್ ಹಾಗೂ ಮನರಂಜನೆ ಸಿಗುವುದರಿಂದ ಬಾಗಿಲು ಹಾಕುವ ದಿನ ದೂರವಿಲ್ಲ ಎಂದರು.

ಡಿವೈ ಎಸ್ಪಿ ಗೀತಾ ಪಾಟೀಲ ಮಾತನಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪತ್ರಿಕೆಗಳಿರುವುದರಿಂದ ಜನರಿಗೆ ಓದುವ ಹವ್ಯಾಸವಿದೆ. ಸತ್ಯ, ನಿಷ್ಠೆ ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ರಾಧಾ ಕೃಷ್ಣ ಭಟ್, ಕಾರ್ಯನಿರತ ಪತ್ರ ಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ ಸುಬ್ರಾಯ್ ಭಟ್ ಬಕ್ಕಳ, ಹಿರಿಯ ಸಹಕಾರಿ ಸುಭಾಷ್ ಶೆಟ್ಟಿ, ಸಂಘದ ಜಿಲ್ಲಾ ಉಪಾಧ್ಯಕ್ಷ ವಿಠ್ಠಲ್ ದಾಸ್ ಕಾಮತ್, ರಾಜ್ಯ ಸಮಿತಿ ಸದಸ್ಯ ಬಸವರಾಜ್ ಪಾಟೀಲ್, ಖಜಾಂಚಿ ರಾಜೇಂದ್ರ ಹೆಗಡೆ, ಪತ್ರಿಕಾ ಮಂಡಳಿ ಸದಸ್ಯ ಪ್ರದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಉತ್ತರಕ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಾದ ಕೆ. ಶಾಮರಾವ್ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತೆ ಶೈಲಜಾ ಗೋರನಮನೆ ಅವರಿಗೆ, ಡಾ, ಯು ಚಿತ್ತರಂಜನ್ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಗಣೇಶ್ ಇಟಗಿ ಹಾಗೂ ಜಿ. ಎಸ್ ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ದೀಪಕ್ ಕುಮಾರ್ SHENVI ಅವರಿಗೆ ನೀಡಿ ಗೌರವಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ಸುಜನ್ ಮನಮೋಹನ್ ನಾಯ್ಕ್ ಹಾಗೂ ದೀಪ್ತಿ ದತ್ತಾತ್ರೇಯ ಭಟ್ ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಸಾಧನೆ ಮಾಡಿದ ತುಳಸಿ ರಾಘವೇಂದ್ರ ಹೆಗಡೆ ಇವರನ್ನು ಪುರಸ್ಕರಿಸಿ ಗೌರವಿಸಲಾಯಿತು.

Comments


Top Stories

bottom of page