top of page

ಪಶ್ಚಿಮ ಘಟ್ಟ ಭಾಗದಲ್ಲಿ ಭೂ ಕಂಪನ

  • Writer: Ananthamurthy m Hegde
    Ananthamurthy m Hegde
  • Dec 1, 2024
  • 1 min read

ಶಿರಸಿ : ಒಂದೆಡೆ ಸೈಕ್ಲೋನ್ ನಿಂದ ಕರಾವಳಿ ಭಾಗದಲ್ಲಿ ಮಳೆ ಸುರಿಯುತಿದ್ದರೇ ಪಶ್ಚಿಮ ಘಟ್ಟದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂ ಕಂಪದ ಅನುಭವವಾಗಿದೆ.

ಕುಮಟಾ -ಶಿರಸಿ ತಾಲೂಕು ಭಾಗದ ಘಟ್ಟ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು ಜನ ಒಂದುಕ್ಷಣ ಭಯಭೀತರಾಗಿದ್ದಾರೆ.

ಕುಮಟಾ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ದೇವಿಮನೆ ಘಟ್ಟ ,ಶಿರಸಿ ತಾಲೂಕಿನ ಪಶ್ಚಿಮಘಟ್ಟ ಗ್ರಾಮವಾದ ರಾಗಿ ಹೊಸಳ್ಳಿ,ಕಸಗೆ, ಬಂಡಳ, ಮತ್ತಿಘಟ್ಟ,ಸಂಪಖಂಡ , ಕಾನ್ಸುರು ಸಿದ್ದಾಪುರದ ಕ್ಯಾದಗಿ, ಬೇಡ್ಕಣಿ ಭಾಗದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂಮಿ ಕಂಪಿಸಿದೆ.

ಹಿಂದೂ ಮಹಾಸಾಗರದಲ್ಲಿ 10 ಕಿಲೋಮೀಟರ್ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂ ಕಂಪನವಾಗಿದೆ.ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.

ಒಟ್ಟಿನಲ್ಲಿ ಹಿಂದೂ ಮಹಾಸಾಗರದಲ್ಲಿ ಕಂಪಿಸಿದ ಭೂಮಿಯಿಂದ ಪಶ್ಚಿಮ ಘಟ್ಟ ಭಾಗದಲ್ಲಿ ಸಹ ಅದರ ಪರಿಣಾಮ ಕಾಣಿಸಿಕೊಂಡಿದ್ದು ಜನರನ್ನು ಒಂದುಕ್ಷಣ ಭಯಭೀತರನ್ನಾಗಿಸಿತ್ತು.

Comments


Top Stories

bottom of page