ಫೆ.8 ರಂದು ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ
- Ananthamurthy m Hegde
- Jan 1
- 1 min read
ಶಿರಸಿ ನಗರದ ಪ್ರಜ್ವಲ ಟ್ರಸ್ಟ್ ವತಿಯಿಂದ ಫೆ.8 ರಂದು ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷೆ ಬಿಂದು ಹೆಗಡೆ ತಿಳಿಸಿದರು.
ನಗರದ ಸಾಮ್ರಾಟ್ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೆಮ್ಮದಿ ಕುಟೀರದ ರಂಗಧಾಮದಲ್ಲಿ ಬೆಳೆಗ್ಗೆ 10 ಗಂಟೆಯಿಂದ ಸ್ಪರ್ಧೆ ಆರಂಭಗೊಳ್ಳಲಿದ್ದು, ಸ್ಪರ್ಧಾಳು 18 ವರ್ಷ ಮೇಲ್ಪಟ್ಟವಾರಾಗಿರಬೇಕು. ಪ್ರತಿ ಗುಂಪಿಗೆ 400 ರೂಪಾಯಿ ಪ್ರವೇಶ ಶುಲ್ಕ ನಿಗಧಿಪಡಿಸಿದ್ದು, ಪ್ರಥಮ ಬಹುಮಾನ 8 ಸಾವಿರ, ದ್ವೀತಿಯ 6 ಸಾವಿರ, ತೃತೀಯ 4 ಸಾವಿರ ಹಾಗೂ ಪ್ರೋತ್ಸಾಹಕವಾಗಿ 2 ಸಾವಿರ ರೂ ಬಹುಮಾನವನ್ನ ನಿಗಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ದತ್ತಾತ್ರೇಯ ಹೆಗಡೆ, ನಯನ ಹೆಗಡೆ, ಸುಮ ಹೆಗಡೆ ಇದ್ದರು.
Comentários