top of page

ಬಿ.ಆರ್.ಅಂಬೇಡ್ಕರವರಿಗೆ ಅಪಮಾನ ಮಾಡಿದ ಗೃಹ ಸಚಿವ

  • Writer: Ananthamurthy m Hegde
    Ananthamurthy m Hegde
  • Dec 23, 2024
  • 1 min read


ಮುಂಡಗೋಡ :ಪ್ರೋ.ಬಿ.ಕೃಷ್ಣಪ್ಪ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಮುಂಡಗೋಡ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು . ಕೇಂದ್ರ ಸರ್ಕಾರದ  ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಡಾ ಬಿ.ಆರ್.ಅಂಬೇಡ್ಕರವರಿಗೆ ಅಪಮಾನ ಮಾಡಿದ ಹಾಗೂ ಬೆಳಗಾವಿ ಸುವರ್ಣ ವಿಧಾನ ಪರಿಷತ್‌ನಲ್ಲಿ ಹೆಣ್ಣು ಮಗಳಿಗೆ ಅಶ್ಲೀಲ ಪದ ಬಳಸಿ ಅಪಮಾನ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ, ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿಗಳಿಗೆ, ರಾಷ್ಟ್ರಪತಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಭಾರತ ಸರ್ಕಾರದ ಗೃಹ ಸಚಿವರಾದ ಅಮಿತ್ ಶಾರವರು ಲೋಕಸಭೆಯ ಕಲಾಪದಲ್ಲಿ ಮಾತನಾಡುತ್ತಿರುವಾಗ ಅಂಬೇಡ್ಕರ, ಅಂಬೇಡ್ಕರ, ಅಂಬೇಡ್ಕರ ಎಂದು ಹೇಳುವುದು ಇತ್ತೀಚಿಗೆ ಕೆಲವರಿಗೆ ಪ್ಯಾಶನ್ ಆಗಿದೆ. ಅಂಬೇಡ್ಕರ ಬದಲು ದೇವರ ಹೆಸರು ಹೇಳಿದ್ದರೆ. ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು. ಎಂದು ಹೇಳಿ ಸಂವಿಧಾನ ಶಿಲ್ಪಿ, ಭಾರತ ರತ್ನ, ಸಮಾಜಿಕ ನ್ಯಾಯದ ಹರಿಕಾರ, ಭಾರತದ ನವ ನಿರ್ಮಾಣದ ನಿರ್ಮಾಪಕ, ಸಮ ಸಮಾಜದ ನಿರ್ಮಾಣ ಮಾಡಿದ ಮಹಾನ್ ಜಾತ್ಯಾತೀತ ನಾಯಕ, ವಿಶ್ವಜ್ಞಾನಿ, ಡಾ|| ಬಿ.ಆರ್.ಅಂಬೇಡ್ಕರವರಿಗೆ ಲೋಕಸಭೆಯಲ್ಲಿ ಅಪಮಾನ ಮಾಡಿರುವುದನ್ನು ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ.

ಸಾವಿರಾರು ವರ್ಷಗಳಿಂದ ಯಾವುದೆ ರಾಜರು, ದೈವ ಮತ್ತು ದೇವರು ಭಾರತದ ಜನರಿಗೆ ಅಸಮಾನತೆ, ಜ್ಯಾತ್ಯಾತೀಯತೆ , ಲಿಂಗ ತಾರತಮ್ಯ, ದೌರ್ಜನ್ಯ, ದಬ್ಬಾಳಿಕೆ ಎಂತಹ ಅಮಾನವಿಯ ಅನಿಷ್ಠ ಪದ್ದತಿಗಳನ್ನು ಮುಕ್ತಿಗೊಳಿಸಿ ಸಮಾಜಿಕ ನ್ಯಾಯಾ ಮತ್ತು ಸಮಾನತೆ ಕೊಡದೆ ಇರುವ ಶಕ್ತಿಗಳನ್ನು ಮೀರಿ ಡಾ|| ಬಾಬಾ ಸಾಹೇಬ ಅಂಬೇಡ್ಕರವರು ಸಂವಿಧಾನ ಬರೆಯುವ ಮೂಲಕ ಭಾರತ ದೇಶದ ಜನತಗೆ ಸಮಾನತೆ, ಸಮಾಜಿಕ ನ್ಯಾಯಾ, ಸೇರಿದಂತೆ ರಾಜಕೀಯ, ಸ್ವಾತಂತ್ರವನ್ನು ಕೊಟ್ಟಿದ್ದಾರೆ . ಅಮಿತ್ ಶಾ ಅವರು ಕೇಂದ್ರ ಗೃಹ ಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವುದು ಡಾ|| ಅಂಬೇಡ್ಕರವರು ಬರೆದ ಸಂವಿಧಾನದ ಅಡಿಯಲ್ಲಿ ಈ ಎಲ್ಲ ಸತ್ಯ ಗೊತ್ತಿದ್ದರು ಅಮಿತ್ ಶಾ ರವರು ಅಂಬೇಡ್ಕರ ರವರಿಗೆ ಅಪಮಾನ ಮಾಡಿರುವುದು ದೇಶದ ಬಹು ಸಂಖ್ಯಾತ ಜನರಿಗೆ ಮತ್ತು ಅಂಬೇಡ್ಕರ ಅಭಿಮಾನಿಗಳ ಮನಸ್ಸಿಗೆ ನೋವನ್ನುಂಟು ಮಾಡಿದೆ.

ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಅಂಬೇಡ್ಕರವರಿಗೆ ಅಪಮಾನ ಮಾಡಿದ ಅಮಿತ್ ಶಾ ರವರೆ ಬಗ್ಗೆ ಚರ್ಚೆಯಾಗುತ್ತಿರುವಾಗ ಪರಿಷತ್‌ನ ಸದಸ್ಯ ಸಿ.ಟಿ.ರವಿ ಅವರು ಮಹಿಳಾ ಸಚಿವರಿಗೆ ಅಶ್ಲೀಲ ಪದ ಬಳಸಿ ಹೆಣ್ಣು ಮಗಳಿಗೆ ಅಪಮಾನ ಮಾಡಿದ ಸಿ.ಟಿ.ರವಿ ಇವರ ಈ ಕೃತ್ಯವನ್ನು ಖಂಡಿಸುತ್ತೇವೆ.

ಕೇಂದ್ರ ಗೃಹ ಮಂತ್ರಿ ಸ್ಥನದಿಂದ ಅಮಿತ್ ಶಾ ಅವರನ್ನು ವಜಾ ಗೊಳಿಸಲು ಮತ್ತು ವಿಧಾನ ಪರಿಷತ್ ಸದಸ್ಯತ್ವದಿಂದ ಸಿ.ಟಿ.ರವಿ ಇವರನ್ನು ವಜಾ ಗೊಳಿಸಿ ಇವರಿಬ್ಬರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಲು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕ್ಕೀರಪ್ಪ, ಸಂತೋಷ ಕಟ್ಟಿಮನಿ, ಗೋಪಾಲ ನಡಕಿನಮನಿ, ಸಂಗಿತಾ ವಾಗ್ಮೋರೆ , ಜೋಜೆ ಪಿ.ಸಿದ್ದಿ, ಹುಲಗಪ್ಪ ಭೋವಿವಡ್ಡರ ಉಪಸ್ಥಿತರಿದ್ದರು .

Comentários


Top Stories

bottom of page