top of page

ಬಿಎಂಟಿಸಿಯಿಂದ ಹೊಸ ಮಾರ್ಗಗಳಲ್ಲಿ ಬಸ್‌ ಸಂಚಾರ ಆರಂಭ

  • Writer: Ananthamurthy m Hegde
    Ananthamurthy m Hegde
  • Dec 28, 2024
  • 1 min read
ree

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅರ್ಥಾತ್ ಬಿಎಂಟಿಸಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗವನ್ನು ಆರಂಭಿಸಿದೆ. ಡಿಸೆಂಬರ್ 26ರಿಂದಲೇ ಹೊಸ ಮಾರ್ಗದಲ್ಲಿ ಬಸ್‌ಗಳು ಸೇವೆ ಆರಂಭಗೊಂಡಿದ್ದು, ಈ ಹೊಸ ಮಾರ್ಗಗಳ ಅನುಕೂಲತೆಯನ್ನು ಪಡೆದುಕೊಳ್ಳುವಂತೆ ಬಿಎಂಟಿಸಿ ಮನವಿ ಮಾಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬಿಎಂಟಿಸಿ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣರಹಿತ ಸೇವೆಯಲ್ಲಿ ನೂತನ ಮಾರ್ಗಗಳನ್ನು ಪರಿಚಯಿಸುತ್ತಿದ್ದು, ಬನಶಂಕರಿ ಬಸ್ ನಿಲ್ದಾಣದಿಂದ ಹಾರೋಹಳ್ಳಿ, ದಯಾನಂದ ಸಾಗರ ವೈದ್ಯಕೀಯ ಕಾಲೇಜು, ಕೋಣಕುಂಟೆ ಕ್ರಾಸ್, ತಲಘಟ್ಟಪುರ, ಕಗ್ಗಲೀಪುರ, ಹಾರೋಹಳ್ಳಿ ಕೀರನಗರೆ ಗೇಟ್ ಮಾರ್ಗದಲ್ಲಿ 2 ಬಸ್ಸುಗಳು 14 ರೌಂಡ್ ಪ್ರಯಾಣ ನಡೆಸಲಿದೆ. ಈ ಮಾರ್ಗದಲ್ಲಿ ಬನಶಂಕರಿ ಬಸ್ ನಿಲ್ದಾಣದಿಂದ 06:35, 06:50, 10:10, 10:40, 14:15, 14:40, 18:00 ಗಂಟೆಗೆ ಬಸ್ ಗಳು ಹೊರಡಿಲಿದೆ. ಹಾರೋಹಳ್ಳಿ ದಯಾನಂದ ಸಾಗರ ವೈದ್ಯಕೀಯ ಕಾಲೇಜು ನಿಲ್ದಾಣದಿಂದ 08:10, 08:30, 11:55, 12:30, 16:00, 16:25, 19:45ಕ್ಕೆ ಬಸ್ ಗಳು ಹೊರಡಲಿದೆ.

ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು 2023ರ ಡಿಸೆಂಬರ್ 23ರಂದು ನೈಸ್10 ಮಾರ್ಗಕ್ಕೆ ಚಾಲನೆ ನೀಡಿದ್ದರು. ಬೆಂಗಳೂರು ಹೊರವಲಯದ ಪ್ರಯಾಣಿಕರ ಅನುಕೂಲಕ್ಕೆ ಅಂತ ನೈಸ್ 10 ಮಾರ್ಗವನ್ನು ಪ್ರಾರಂಭಿಸಲಾಗಿತ್ತು. ಸದ್ಯ ಈ ಮಾರ್ಗವೂ ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದ್ದು, ಮಾದವರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬೆಳಗ್ಗೆ 6ರಿಂದ ರಾತ್ರಿ 9 ಗಂಟೆವರೆಗೂ 10 ನಿಮಿಷಕ್ಕೆ ಒಮ್ಮೆ ಬಸ್ ಗಳು ಸಂಚಾರ ಮಾಡುತ್ತಿವೆ.

ಈ ಮಾರ್ಗ ಪ್ರಾರಂಭವಾದ ಬಳಿಕ ಒಂದು ವರ್ಷದಲ್ಲಿ 60,000 ಪ್ರಯಾಣಿಕರಿಂದ 3,00,000 ಪ್ರಯಾಣಿಕರವರೆಗೆ ಸೇವೆಯ ಪಡೆದುಕೊಂಡಿದ್ದಾರೆ. ಸುಮಾರು 22 ಲಕ್ಷಗಳಿಂದ ಒಂದು ಕೋಟಿ ವರೆಗೆ ಆದಾಯ ಹೆಚ್ಚಳವಾಗಿದ್ದು, ಒಟ್ಟು 25 ಲಕ್ಷ ಪ್ರಯಾಣಿಕರು, ಈ ಯಶಸ್ಸಿಗೆ ಕಾರಣರಾಗಿದ್ದಾರೆ. ಈ ವಿಷಯಕ್ಕೆ ಬಿಎಂಟಿಸಿ ಗ್ರಾಹಕರಿಗೆ ಧನ್ಯವಾದವನ್ನು ಹೇಳಿದೆ .

Comments


Top Stories

bottom of page