top of page

ಬಿಬಿಎಂಪಿ ಹೋಯ್ತು, 'ಗ್ರೇಟರ್​ ಬೆಂಗಳೂರು' ಆಯ್ತು!

  • Writer: Ananthamurthy m Hegde
    Ananthamurthy m Hegde
  • 3 days ago
  • 1 min read


ಬೆಂಗಳೂರು: ನಾಳೆಯಿಂದಲೇ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರುತ್ತಿದೆ ಎಂಬುದರ ಕುರಿತು ಸರ್ಕಾರ ಕೂಡ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನ ಪ್ರಾದೇಶಿಕತೆ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಕೂಡ ಹೆಚ್ಚಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರಾಗಲಿದ್ದು, ಡಿಸಿಎಂ ಡಿಕೆ ಶಿವಕುಮಾರ್​ಉಪಾಧ್ಯಕ್ಷರಾಗಲಿದ್ದಾರೆ. ಬೆಂಗಳೂರಿನ ಆಡಳಿತ ನೋಡಿಕೊಳ್ತಿದ್ದ ಬಿಬಿಎಂಪಿ ಇನ್ನು ನೆನಪು ಮಾತ್ರ ನಾಳೆಯಿಂದ ಗ್ರೇಟರ್​ ಬೆಂಗಳೂರು ಅಸ್ಥಿತ್ವಕ್ಕೆ ಬರಲಿದೆ. ಸರ್ಕಾರ ಈ ಕುರಿತು ವಿಧೇಯಕ ಜಾರಿತ್ತು. ರಾಜಪಾಲರು ಕೂಡ ಗ್ರೀನ್​ ಸಿಗ್ನಲ್ ಕೊಟ್ಟಿದ್ರು. ಹೀಗಾಗಿ ನಾಳೆಯಿಂದ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ.


Comments


Top Stories

bottom of page