ಬನವಾಸಿ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆ: ೨೫ ಕೆ.ಜಿ ಹಂದಿ ಮಾಂಸ ವಶ
- Ananthamurthy m Hegde
- Nov 6, 2024
- 1 min read

ಶಿರಸಿ: ಬನವಾಸಿ ವಲಯದ ಅರಣ್ಯ ಸಿಬ್ಬಂದಿ ಓರ್ವ ಕಾಡು ಪ್ರಾಣಿ ಬೇಟೆಗಾರನನ್ನು ಬಂಧಿಸಿ ೨೫ ಕೆಜಿ ತೂಕದ ಕಾಡು ಹಂದಿ ಮಾಂಸ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಮುಗವಳ್ಳಿಯ ಪರಶುರಾಮ ಲಕ್ಷ್ಮಣ ಕಾಳೇನವರ್ ಬಂಧಿತ ಆರೋಪಿ. ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್ ನಿಂಗಾಣಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗಂಗೆಮತ, ಯಶೋದಾ ನಾಯ್ಕ, ಮಹೇಶ ಅಜ್ಮೀರ, ಅರಣ್ಯ ಪಾಲಕ ಬಸನಗೌಡ ಹಲಗಿ, ಖಾದರ ಸಾಬ್, ಪರಶುರಾಮ, ಮಂಜುನಾಥ ನಾಯ್ಕ ಪಾಲ್ಗೊಂಡಿದ್ದರು.















Comments