ಬಸ್ ಮತ್ತು ಕಾರ್ ನಡುವೆ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ
- Ananthamurthy m Hegde
- Nov 25, 2024
- 1 min read
ಸಿದ್ದಾಪುರ : ಬಸ್ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಹಿಸಿ ಇಬ್ಬರಿಗೆ ಗಾಯವಾದ ಘಟನೆ ಸಿದ್ದಾಪುರ ತಾಲೂಕಿನ ಮಾವಿನ ಗುಂಡಿ ಸಮೀಪದ ಹೆಜನಿ ಬಳಿ ಶುಕ್ರವಾರ ಸಂಭವಿಸಿದೆ.
ಹೊನ್ನಾವರ ಕಡೆಯಿಂದ ಸಾಗರ ಕಡೆಗೆ ಹೋಗುತ್ತಿದ್ದ ಬಸ್ ಚಾಲಕನು ಅತಿ ವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಕಾರ್ ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ ಮುರಳಿ ವಿನೋಬನಗರ ಶಿವಮೊಗ್ಗ ಹಾಗೂ ಜಯಶ್ರೀ ಮುರಳಿ ಇವರಿಗೆ ಗಾಯವಾಗಿದೆ.
ಘಟನೆಯಲ್ಲಿ ಕಾರು ಹಾಗೂ ಬಸ್ ಜಕಮ್ ಗೊಂಡಿದ್ದು ಬಸ್ ಚಾಲಕ ಅನಿಲ್ ಕುಮಾರ್ ಹೊಸಕೋಟೆ ಬೆಂಗಳೂರು ಇವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ರವಿವಾರ ದೂರು ದಾಖಲಾಗಿದೆ.














Comments