top of page

ಭೂಕಂಪದ ಕುರಿತು ಪರಿಶೀಲನೆ ನಡೆಸಿದ ತಜ್ಞರ ತಂಡ

  • Writer: Ananthamurthy m Hegde
    Ananthamurthy m Hegde
  • Dec 3, 2024
  • 1 min read


ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ-ಶಿರಸಿ ಭಾಗದಲ್ಲಿ ಭೂಕಂಪವಾದ ಹಿನ್ನೆಲೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಭೂಕಂಪದ ಕುರಿತು ಮಾಧ್ಯಮ ಪ್ರಕಟಣೆ ನೀಡಿದ್ದಾರೆ .

ಮಾಧ್ಯಮಗಳಿಂದ ಮಾಹಿತಿ ಪಡೆದು ಪಶ್ಚಿಮಘಟ್ಟದ ಭಾಗದಲ್ಲಿ ಜನರು ಹಾಗೂ ಗ್ರಾ.ಪಂ.ಗಳ ಜತೆ ಮಾತನಾಡಿದ್ದೇವೆ. ಸುಮಾರು 3 ಸೆಕೆಂಡ್ ಕಾಲ ಕಂಪನವಾಗಿದೆ, ಪಾತ್ರೆಗಳು ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಯಾವುದೇ ಕಂಪನವಿದ್ರೂ ಜೊಯಿಡಾದಲ್ಲಿರುವ ವಿಪತ್ತು ನಿರ್ವಹಣಾ ಕೋಶ ಮಾಹಿತಿ ನೀಡುತ್ತದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಳಿ ಕೇಳಿದಾಗ ಯಾವುದೇ ಕಂಪನ‌‌ ರಿಪೋರ್ಟ್ ಆಗಿಲ್ಲ ಅಂದಿದ್ದಾರೆ. ಜನಸಾಮಾನ್ಯರಿಂದ ಸ್ಪಷ್ಟ ಮಾಹಿತಿ ದೊರೆತ ಮೇಲೆ ಮತ್ತೆ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಸಂಪರ್ಕಿಸಲಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಇಬ್ಬರು ತಜ್ಞರು ಜಿಲ್ಲೆಗೆ ಆಗಮಿಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ತಜ್ಞರ ಪರಿಶೀಲನೆಯ ಬಳಿಕ ಪ್ರಮುಖ ಕಾರಣದ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Posts

See All

Comments


Top Stories

bottom of page