ಭೂಕಂಪದ ಕುರಿತು ಸರ್ವೆ ನಡೆಸಿದ ತಜ್ಞರ ತಂಡ : ಭೂಕಂಪ ನಿಜವೆಂದ ತಂಡ
- Ananthamurthy m Hegde
- Dec 10, 2024
- 2 min read
ಒಂದು ವಾರದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಭೂ ಕಂಪನ ಆಗಿದೆ ಎಂಬ ಸುದ್ಧಿ ಭಾರಿ ಆತಂಕ ಸೃಷ್ಟಿಸಿತ್ತು. ಈ ಕುರಿತ ತಜ್ಞರ ತಂಡ ಭೂ ಕಂಪನ ಆದ ಗ್ರಾಮಗಳಲ್ಲಿ ಸರ್ವೇ ಮಾಡಿದ್ದು, ಭೂಮಿ ಕಂಪನ ಆಗಿರುವುದು ಸತ್ಯ ಎಂದು ಸ್ಪಷ್ಟಪಡಿಸಿದೆ. ಆದರೆ ಇದೊಂದು ನೈಸರ್ಗಿಕ ಪ್ರಕ್ರಿಯೆ ಆಗಿದ್ದು ಜನಸಾಮಾನ್ಯರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದೆ ಈ ಕುರಿತ ವರದಿ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚು ಪ್ರಾಕೃತಿಕ ಸೌಂದರ್ಯ ಹೊಂದಿರುವ ಜಿಲ್ಲೆ. ಈ ಜಿಲ್ಲೆ ಕಳೆದ ಆರು ತಿಂಗಳಲ್ಲಿ ಎರಡು ದುರಂತಗಳಿಗೆ ಸಾಕ್ಷಿ ಆಗಿದೆ. ಹನ್ನೊಂದ ಜನರ ಜೀವ ಬಲಿ ಪಡೆದು , ಹತ್ತಾರು ಸಂಕಷ್ಟಗಳನ್ನು ಎದುರಿಸಿ ಈಗ ನಿರಾಳ ಆಗುತ್ತಿರುವ ಬೆನ್ನಲ್ಲೆ ಇನ್ನೊಂದು ಆತಂಕದ ಸುದ್ಧಿ ಸದ್ದು ಮಾಡಿತ್ತು. ಅದೇ ಭೂಕಂಪನ. ಹೌದು ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡು ಕಾರಣಗಳಿಂದ ಇಲ್ಲಿನ ಜನ ತತ್ತರಿಸಿ ಹೊಗಿದ್ದಾರೆ ಅಲ್ಲದೆ. ಶಿರೂರು ಭೂ ಕೂಸಿತ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಾಳಿ ಸೇತುವೆ ಕುಸಿದು ಬಿದ್ದಿರುವ ಕರಿ ಛಾಯೆ ಇನ್ನೂ ಮಾಸಿಲ್ಲ. ಹೀಗಿರುವಾಗಲೆ ಕಳೆದ ಒಂದು ವಾರದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಶಿರಸಿ ಯ ಮಧ್ಯ ಭಾಗದಲ್ಲಿರುವ ಯಾಣ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಮೂರು ಸೇಕಂಡ ಗಳ ಕಾಲ ಭೂಮಿ ಕಂಪಿಸಿತ್ತು. ಮೊದಲಿಗೆ ಇದು ಒಂದು ಸುಳ್ಳು ವದಂತಿ ಎಂದು ಹೇಳಲಾಗುತಿತ್ತು. ಆದ್ರೆ ಹತ್ತಕ್ಕೂ ಹೆಚ್ಚು ಗ್ರಾಮಗಳ ನೂರಾರು ಜನರು ಭೂ ಕಂಪನದ ಅನುಭವ ಆಗಿದೆ ಎಂದು ಹೇಳಿದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಸಂಪರ್ಕಿಸಿದಾಗ, ಭೂ ಕಂಪನದ ಬಗ್ಗೆ ಯಾವುದೇ ಮಾಹಿತಿ ಮಾಪನದಲ್ಲಿ ದಾಖಲಾಗಿಲ್ಲ, ಹಾಗಾಗಿ ಇದು ಸುಳ್ಳು ಸುದ್ದಿ ಎಂದು ಜಿಲ್ಲಾಡಳಿತ ಹೇಳಿತ್ತು. ಆದ್ರೆ ಜಿಲ್ಲಾಡಳಿತದ ಮಾಹಿತಿ ಸುಳ್ಳು ಸುದ್ದಿ ಎಂದು ಜನರು ತಮಗಾದ ಅನುಭವ ಮಾಧ್ಯಮದ ಮುಂದೆ ಹೇಳಿದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ, ತಜ್ಞರ ತಂಡವನ್ನು ಕರೆಯಿಸಿ ಸರ್ವೇ ಮಾಡಿ ಮಾಹಿತಿ ನೀಡಲು ಸೂಚಿಸಿತ್ತು.
ಜಿಲ್ಲಾಧಿಕಾರಿ ಸೂಚಿಸಿದ್ದ ಪ್ರಕಾರ ಎರಡು ಜನರ ತಜ್ಞರ ತಂಡ ಭೂ ಕಂಪನ ಅನುಭವ ಆಗಿರುವ ಗ್ರಾಮಗಳ ಜನರಿಗೆ ಭೇಟಿ ನೀಡಿ ಅಧ್ಯಯನ ಮಾಡಿದರು. ಬಳಿಕ ಸುತ್ತಮುತ್ತಲೂ ದೊಡ್ಡ ಡ್ಯಾಮ್ ಅಥವಾ ಗಣಿಗಾರಿಕೆ ಆಗುತ್ತಿರುವುದರ ಬಗ್ಗೆ ವಿಚಾರಿಸಿದಾಗ ಯಾವ ಪ್ರಕ್ರಿಯೆ ಇಲ್ಲ ನಡೆಯುತ್ತಿಲ್ಲ ಎಂದು ಸ್ಥಳೀಯರು ಹಾಗೂ ಜಿಲ್ಲಾಡಳಿತ ಹೇಳಿದಾಗ ಇದು ಒಂದು ನೈಸರ್ಗೀಕ ಪ್ರಕ್ರಿಯೆ ಎಂದು ತಜ್ಞರು ತಂಡು ಸ್ಪಷ್ಟಪಡಿಸಿದೆ. ದಟ್ಟ ಕಾಡುಗಳ ಮಧ್ಯ ಮಳೆ ಅಬ್ಬರ ಹೆಚ್ಚಾದಾಗ ಈ ರೀತಿಯ ಭೌಗೋಳಿಕ ಪ್ರಕ್ರಿಯೆ ನಡೆಯುತ್ತಿದ್ದರಿಂದ ಕೇವಲ ಮೂರು ಸೆಕಂಡ್ ಅಷ್ಟೆ ಭೂ ಕಂಪನ ಆಗಿರುವ ಅನುಭವ ಸ್ಥಳೀಯರಿಗೆ ಆಗಿದ್ದು ಇದೊಂದು ಹೊರಪದರದಲ್ಲಿನ ಸ್ಥಳೀಯ ಹಾಗೂ ಜಾಗತಿಕವಾಗಿ ಹೊಂದಾಣಿಕೆಗಳ ಸಾಮಾನ್ಯ ಭಾಗವಾಗಿದೆ. ಎಂದು ತಜ್ಞರ ತಂಡ ಜಿಲ್ಲಾಡಳಿತಕ್ಕೆ ವರದಿ ಕೊಟ್ಟಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕಂಪನ ಆಗಿರುವುದು ನೀಜ ಆದ್ರೆ. ಅದು ದೊಡ್ಡ ಮಟ್ಟದ ಭೌಗೊಳಿಕ ಸಮಸ್ಯೆಯಿಂದ ಆಗಿರುವ ಕಂಪನ ಅಲ್ಲ .ಅದೊಂದು ನೈಸರ್ಗೀಕ ಪ್ರಕ್ರಿಯೆ ಆಗಿದ್ದು ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಹಾಗಾಗಿ ಜಿಲ್ಲೆಯ ಜನ ಆತಂಕ ಪಡುವ ಅಗತ್ಯ
ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.












Comments