ಭಟ್ಕಳದ ನಾಲ್ಕು ಖಾಸಗಿ ಕ್ಲಿನಿಕ್‌ಗಳ ಮೇಲೆ ಧಿಢೀರ ದಾಳಿ ಒಂದು ಕ್ಲಿನಿಕ್ ಜಪ್ತಿ ಸಹಿತ ಇಬ್ಬರು ವೈದ್ಯರಿಗೆ ನೋಟಿಸ್ ಜಾರಿ
- Ananthamurthy m Hegde
- Nov 21, 2024
- 1 min read
ಭಟ್ಕಳ: ಬುಧವಾರ ತಾಲೂಕಿನ ವಿವಿಧ ಖಾಸಗಿ ಕ್ಲಿನಿಕ್‌ಗಳ ಮೇಲೆ ಕೆ.ಪಿ.ಎಂ.ಈ. ಕಾಯ್ದೆಯ ಜಿಲ್ಲಾ ನೂಡಲ್ ಅಧಿಕಾರಿ ಹಾಗೂ ಅವರ ತಂಡ ಧಿಡೀರ್ ದಾಳಿ ಮಾಡಿದೆ. ಈ ವೇಳೆ ಒಂದು ಕ್ಲಿನಿಕ್ ಜಪ್ತಿ ಮಾಡಿದ್ದು ಇಬ್ಬರು ಖಾಸಗಿ ಕ್ಲಿನಿಕ್ ವೈದ್ಯರಿಗೆ ನೋಟಿಸ್ ನೀಡಿದ್ದಾರೆ.
ಕೆ.ಪಿ.ಎಂ.ಈ. ನೂಡಲ್ ಅಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ್ ನೇತೃತ್ವದ ತಂಡವು ಭಟ್ಕಳ ಖಾಸಗಿ ಕ್ಲಿನಿಕ್ ವೈದ್ಯರುಗಳ ಕುರಿತಾಗಿ ಗುಪ್ತ ಕಾರ್ಯಾಚರಣೆಗಿಳಿದಿದ್ದು ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊದಲು ಇಲ್ಲಿನ ಪೇಟೆ ಹನುಮಂತ ದೇವಸ್ಥಾನದ ಸಮೀಪದ ಗಂಡು ಮಕ್ಕಳ ಶಾಲೆಯ ಪಕ್ಕದ ರಂಜನ್ ಕ್ಲಿನಿಕ್ ಡಾ.ವಿವೇಕ ಭಟ್ ಅವರ ಕ್ಲಿನಿಕಗಳ ಮೇಲೆ ದಾಳಿ ನಡೆಸಿದ ವೇಳೆ ಅವರ ಬಳಿಯಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಯಾವುದೇ ದಾಖಲೆ ಮತ್ತು ಸಂಬAಧಿತ ಡಿಗ್ರಿಯು ಇಲ್ಲದ ಕಾರಣ ಅವರ ಕ್ಲಿನಿಕನ್ನು ಸ್ಥಳದಲ್ಲೇ ಜಪ್ತಿ ಮಾಡಿದರು.
ನಂತರ ಸರ್ಪನಕಟ್ಟೆಯಲ್ಲಿನ ಶ್ರೀ ದುರ್ಗಾ ಕ್ಲಿನಿಕ್‌ಗೆ ತೆರಳಿದ ಅಧಿಕಾರಿಗಳು ಅವರಿಂದ ದಾಖಲೆ ಪರಿಶೀಲನೆ ನಡೆಸಿದ್ದು, ದಾಖಲೆ ಸರಿಯಿದ್ದವು. ಹಾಗೂ ಕ್ಲಿನಿಕನಲ್ಲಿನ ಬಯೋ ಮೆಡಿಕಲ್ ವೇಸ್ಟ್ ಸರಿಯಿಲ್ಲದ ಹಿನ್ನೆಲೆ ಅವರಿಗೆ ನೋಟಿಸ್ ನೀಡಿ ಸೂಚನೆ ನೀಡಿದರು.
ತೆಂಗಿನಗುAಡಿ ಹೆಬಳೆ ಹೆರ್ತಾರ್ ಕ್ರಾಸ್ ಗುರುರಾಜ್ ಕ್ಲಿನಿಕ್ ಡಾ. ವಿನಯ ಹೆಬ್ಬಾರ ಕ್ಲಿನಿಕಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅವರು ಹೋಮಿಯೋಪತಿ ವೈದ್ಯರಾಗಿದ್ದು ಸಂಬAಧಿತ ದಾಖಲೆಗಳಿದ್ದು, ಆದರೆ ಅಲೋಪತಿ ಔಷಧಿಯನ್ನು ನೀಡುತ್ತಿದ್ದ ಹಿನ್ನೆಲೆ ಅವರಿಗೆ ನೊಟೀಸ್ ನೀಡಲಾಗಿದೆ.
ಆಜಾದ್ ನಗರದಲ್ಲಿನ ಹೊಸದಾಗಿ ನಿರ್ಮಿಸಲಾದ ನೌಮನ್ ಕ್ಲಿನಿಕಗೂ ಪರಿಶೀಲನೆ ನಡೆಸಿದ್ದು ಈ ವೇಳೆ ಕ್ಲಿನಿಕ್ ವೈದ್ಯರು ಹೋಮಿಯೋಪತಿ ವೈದ್ಯರಾಗಿದ್ದಾರೆ. ಸಂಬAದಿತ ದಾಖಲೆಗಳು ಸಮರ್ಪಕವಾಗಿದ್ದು, ಇವರು ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯಿದೆಯಡಿಯಲ್ಲಿ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದು ಅವರಿಗೆ ಪರವಾನಿಗೆ ಪಡೆದು ಕ್ಲಿನಿಕ್ ನಡೆಸುವಂತೆ ಸೂಚಿಸಿದರು.
ಈ ವೇಳೆ ನೂಡಲ್ ಅಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ್ ಅವರ ಸಹಾಯಕರು, ಭಟ್ಕಳ ತಾಲೂಕಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ, ಆಸ್ಪತ್ರೆಯ ಸಿಬ್ಬಂದಿ ವೆಂಕಟೇಶ ನಾಯ್ಕ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.














Comments