ಭಟ್ಕಳದಲ್ಲಿ ಅಕ್ರಮ ಕೋಣ ಸಾಗಾಟ : ಇಬ್ಬರ ಬಂಧನ
- Ananthamurthy m Hegde
- Mar 14
- 1 min read
ಕಾರವಾರ: ಭಟ್ಕಳದಿಂದ ಮಂಗಳೂರು ಭಾಗಕ್ಕೆ ಅಕ್ರಮವಾಗಿ ಕೋಣಗಳ ಸಾಗಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಾವೇರಿ ಮೂಲದ ಜೈನುಲ್ಲಾ ಚಮನ್ ಸಾಬ್ (28), ಇಮಾಮ್ ಹುಸೇನ್ ಮೌಲಾಲಿ ಸಾಬ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಪಿಎಸ್‍ಐ ರನ್ನಗೌಡ ಪಾಟೀಲ್ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ವಾಹನದ ಸಮೇತ 17 ಕೋಣಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 2ಕೋಣಗಳು ಸಾವನ್ನಪ್ಪಿವೆ. ಈ ಸಂಬಂಧ ಭಟ್ಕಳದ ಶಿರಾಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comentários