ಭಟ್ಕಳದಲ್ಲಿ ಭೂ ಸುರಕ್ಷಾ ಯೋಜನೆಗೆ ಸಚಿವ ಮಂಕಾಳ ವೈದ್ಯ ಚಾಲನೆ
- Ananthamurthy m Hegde
- Jan 13
- 1 min read
ಭಟ್ಕಳ: ಇಲ್ಲಿನ ತಾಲೂಕು ಆಡಳಿತಸೌಧದಲ್ಲಿ ತಾಲೂಕು ಆಡಳಿತದ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂದಾಖಲೆಗಳ ಡಿಜಿಟಲೀಕರಣದ ಭೂ ಸುರಕ್ಷಾ ಕಾರ್ಯಕ್ರಮಕ್ಕೆ ಮೀನುಗಾರಿಕೆ ರಾಜ್ಯದ ಬಂದರು ಒಳನಾಡು ಜಲಸಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ರವಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ನಮ್ಮ ಸರ್ಕಾರ ಬಂದ ಬಳಿಕ ಭೂ ಸುಧಾರಣೆ ಆಪ್ ಅನ್ನು ಸಿದ್ಧಪಡಿಸಿದ್ದು. ಈಗಾಗಲೇ 25 ರಿಂದ 30 ಶೇ ದಷ್ಟು ಸ್ಕ್ಯಾನ್ ಮಾಡಲಾಗಿದೆ. ಜೂನ್ ತಿಂಗಳಿನ ಒಳಗಾಗಿ ನಮ್ಮ ಅಧಿಕಾರಿಗಳು ಪೂರ್ತಿ ಕೆಲಸ ಮುಗಿಸುತ್ತಾರೆಂಬ ಭರವಸೆ ಇದೆ. ಈ ಮೊದಲು ಎಂಟ್ರಿ ಉತ್ತರ ಬೇಕೆಂದರೆ ಏಜೆಂಟ್ ಗಳನ್ನು ಕರೆದುಕೊಂಡು ಬರುತ್ತಿದ್ದರು. ಆದರೆ ಈಗ ಕೇಳಿದ ತಕ್ಷಣ ಆ ಕ್ಷಣದಲ್ಲಿ ಎಂಟ್ರಿ ಉತ್ತರ ಹಾಗೂ ಒಂದು ಭೂಮಿಯ ಎಲ್ಲಾ ದಾಖಲೆಗಳನ್ನು ಸಿಗುವ ರೀತಿಯಲ್ಲಿ ರಾಜ್ಯದಲ್ಲಿ ಪ್ರಾರಂಭ ಮಾಡಿದ್ದೇವೆ. ಸಾರ್ವಜನಿಕರು ದಾಖಲೆಗಳನ್ನು ಪಡೆದುಕೊಳ್ಳಲು ಈ ಹಿಂದೆ ಅರ್ಜಿ ನೀಡಿ, ದಾಖಲೆಗಳನ್ನು ಪರಿಶೀಲನೆ ಮಾಡಿ ಕೊಡುವ ವ್ಯವಸ್ಥೆ ಇತ್ತು. ಇದರಿಂದ ಕೆಲವರಿಗೆ ಬೇಗ ಸೌಲಭ್ಯ ದೊರೆತು ಇನ್ನು ಕೆಲವರಿಗೆ ವಿಳಂಬವಾಗುತ್ತಿತ್ತು. ಇನ್ನು ಮುಂದೆ ಇಂತಹ ಇರುವುದಿಲ್ಲ ಎಂದು ಹೇಳಿದರು . ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ,
ಶಿರಸ್ತೆದಾರ್ ಪ್ರವೀಣ ಹಾಗೂ ಮಣಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Comentarios