ಮಂಚಿಕೇರಿಯಲ್ಲಿ ಉದ್ಘಾಟನೆಗೊಂಡ ಸಂಸ್ಕೃತಿ ಉತ್ಸವ
- Ananthamurthy m Hegde
- Nov 22, 2024
- 1 min read
ಯಲ್ಲಾಪುರ: ತಾಲೂಕಿನ ಮಂಚಿಕೇರಿಯಲ್ಲಿ ಗುರುವಾರ ಸಂಜೆ ರಂಗ ಸಮೂಹ, ಸಪ್ತಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಂಸ್ಕೃತಿ ಉತ್ಸವವನ್ನು ತಾನ್ಸೇನ್ ಪ್ರಶಸ್ತಿ ಪುರಸ್ಕೃತ ಪಂಡಿತ್ ಗಣಪತಿ ಭಟ್ ಹಾಸಣಗಿ ಉದ್ಘಾಟಿಸಿದರು.
ಹಿರಿಯ ಸಹಕಾರಿ ಆರ್ ಎನ್ ಹೆಗಡೆ ಗೋರ್ಸಗದ್ದೆ ಮಾತನ್ನಾಡಿ, ರಂಗಸಮೂಹ ಬೆಳೆದು ಬಂದ ದಾರಿ, ಹಳೆಯ ನೆನಪುಗಳನ್ನು ತೆರೆದಿಟ್ಟರು. ಸ್ಥಳೀಯ ಪ್ರಮುಖರಾದ ಜಿ.ಎನ್.ಶಾಸ್ತ್ರಿ ಜೋಗಭಟ್ರಕೇರಿ ಸಂಸ್ಕೃತಿ ಉತ್ಸವದ ಮೂರು ದಿನಗಳ ನಾಟಕಗಳ ಪರಿಚಯವನ್ನು ಮಾಡಿಕೊಟ್ಟರು. ರಂಗಸಮೂಹದ ಅಧ್ಯಕ್ಷರ ರಾಮಕೃಷ್ಣ ಭಟ್ಟ ದುಂಡಿ , ರಂಗಸಮೂಹದ ಸಂಚಾಲಕ ಎಂ.ಕೆ ಭಟ್ ಯಡಳ್ಳಿ, ಪ್ರಕಾಶ್ ಭಟ್ ಇತರರಿದ್ದರು.
ನಂತರ ನಿನಾಸಂ ತಿರುಗಾಟ ತಂಡದಿಂದ ನಡೆದ ಮಾಲತಿ ಮಾಧವ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಭವಭೂತಿ ರಚನೆಯ ಈ ನಾಟಕಕ್ಕೆ ವಿದ್ಯಾ ಹೆಗಡೆ, ಭಾರ್ಗವ.ಕೆ.ಎನ್, ಎಚ್.ಎಂ.ಗಣೇಶ ಅವರ ಸಂಗೀತ ವಿನ್ಯಾಸವಿದೆ. ಕೆ.ವಿ.ಅಕ್ಷರ ಅವರ ರೂಪ ನಿರ್ದೇಶನದಲ್ಲಿ ನಾಟಕ ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು.












Comments