top of page

ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ವಿರುದ್ಧ ವಂಚನೆ ಕೇಸ್!

  • Writer: Ananthamurthy m Hegde
    Ananthamurthy m Hegde
  • Jan 1
  • 1 min read

ಉದ್ಯೋಗಿಗಳ ಇಪಿಎಫ್‌ ಪಾವತಿಸದೇ ವಂಚನೆ ಮಾಡಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ವಿರುದ್ಧ ಬಂಧನದ ವಾರಂಟ್ ಜಾರಿಯಾಗಿತ್ತು. ಆದರೆ, ವಾರಂಟ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರ ಹೈಕೋರ್ಟ್ ಪೀಠ ತಡೆ ನೀಡಿದೆ.

23 ಲಕ್ಷ ರೂ. ವಂಚನೆ ಕೇಸ್

ಸೆಂಚುರಿ ಲೈಫ್‌ ಸ್ಟೈಲ್‌ ಬ್ರ್ಯಾಂಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕರಾಗಿರುವ ರಾಬಿನ್‌ ಉತ್ತಪ್ಪ ಅವರು ಉದ್ಯೋಗಿಗಳಿಗೆ 23 ಲಕ್ಷ ರೂ. ಇಪಿಎಫ್‌ ಪಾವತಿಸದೆ ವಂಚಿಸಿರುವ ಆರೋಪ ಹಿನ್ನೆಲೆಯಲ್ಲಿ ಕೆ.ಆರ್‌.ಪುರ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಷಡಾಕ್ಷರ ಗೋಪಾಲ ರೆಡ್ಡಿ ಅವರು ಡಿಸೆಂಬರ್ 4 ರಂದು ಬಂಧನ ವಾರಂಟ್‌ ಜಾರಿಗೊಳಿಸಿ ಆದೇಶಿಸಿದ್ದರು. ಈ ತಿಂಗಳ ಆರಂಭದಲ್ಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಬಿನ್ ಉತ್ತಪ್ಪ ಅವರು ಸಾಮಾಜಿಕ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ್ದರು.

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ರಾಬಿನ್‌ ಉತ್ತಪ್ಪ, ಈ ಹಿಂದೆ ಪುಲಕೇಶಿನಗರ ವ್ಯಾಪ್ತಿಯಲ್ಲಿ ವಾಸವಿದ್ದರು. ಹಾಗಾಗಿ, ಉತ್ತಪ್ಪ ಅವರನ್ನು ಬಂಧಿಸುವಂತೆ ಇಪಿಎಫ್‌ಒ ಆಯುಕ್ತರು ಪುಲಕೇಶಿನಗರ ಠಾಣೆ ಪೊಲೀಸರಿಗೆ ಪತ್ರ ಬರೆದಿದ್ದರು. ಆದರೆ, ಉತ್ತಪ್ಪ ಅವರು ಕಳೆದ ಒಂದು ವರ್ಷದಿಂದ ಠಾಣಾ ವ್ಯಾಪ್ತಿಯಲ್ಲಿ ವಾಸವಿಲ್ಲವೆಂಬ ಮಾಹಿತಿಯನ್ನು ಭವಿಷ್ಯ ನಿಧಿ ಆಯುಕ್ತರಿಗೆ ತಿಳಿಸಲಾಗಿದೆ. ಈ ಕುರಿತ ಮುಂದಿನ ಕಾನೂನು ಕ್ರಮಗಳನ್ನು ಆಯುಕ್ತರು ನಿರ್ಧರಿಸಲಿದ್ದಾರೆ ಎಂದು ಪೊಲೀಸರು ಹೇಳಿದ್ದರು.

ಏನೆಂದು ಸ್ಪಷ್ಟನೆ ನೀಡಿದ್ದಾರೆ ?

2018-19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸು ತೊಡಗಿಸಿದ್ದೆ. ಇದೇ ಕಾರಣಕ್ಕೆ ಆ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕಗೊಳಿಸಿದ್ದವು. ಆದಾಗ್ಯೂ ಸಹ ನಾನು ಆ ಕಂಪನಿಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರವನ್ನು ಹೊಂದಿರಲಿಲ್ಲ ಹಾಗೂ ಆ ಕಂಪನಿಗಳ ದೈನಂದಿನ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರಲಿಲ್ಲ ಎಂದು ತಿಳಿಸಿದ್ದರು.




Comments


Top Stories

bottom of page