ಮುಂಡಗೋಡ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಚುನಾವಣೆ
- Ananthamurthy m Hegde
- Dec 27, 2024
- 1 min read
ಮುಂಡಗೋಡ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹಾಗೂ ಚವಡಳ್ಳಿ ಮಲವಳ್ಳಿ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆಯೂ ಶುಕ್ರವಾರ ಬಿರುಸಿನ ನಡೆಯಿತು.
ಪಟ್ಟಣದ ಸಹಕಾರ ಸಂಘದ 12 ನಿರ್ದೇಶಕರ ಆಯ್ಕೆಯಲ್ಲಿಈಗಾಗಲೇ ಕಾಂಗ್ರೆಸ್ ಬೆಂಬಲಿತ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 10 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.ಇತ್ತ ಚವಡಳ್ಳಿ ಮಲವಳ್ಳಿ ಸಹಕಾರ ಸಂಘ 12ನಿರ್ದೇಶಕರ ಸ್ಥಾನಕ್ಕೆ ಮತದಾನ ನಡೆಯಿತು. ಸಂಜೆ ನಾಲ್ಕು ಘಂಟೆಯವರಿಗೆ ಮತದಾನದ ನಡೆದು ನಂತರ ಮತದಾನ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟಿನಲ್ಲಿ ಸಹಕಾರ ಸಂಘದ ಚುನಾವಣೆಯಲ್ಲಿ ಲೋಕಸಭಾ ವಿಧಾನ ಸಭಾ ಚುನಾವಣೆ ರೀತಿಯಲ್ಲಿ ಅಭ್ಯರ್ಥಿಗಳು ಬಿರುಸಿನಿಂದ ಮತಯಾಚಿಸುತ್ತಿರುವ ಕಂಡುಬಂತು.
Comentarios