top of page

ಮೀನುಗಾರರ ಸೊಸೈಟಿಯಲ್ಲಿ ಮೀನು ಮಾರಾಟ ಉದ್ಯೋಗ ಮಾಡುವ ಎಲ್ಲ ಸಮುದಾಯದವರಿಗೆ ಅವಕಾಶ ಕಲ್ಪಿಸಲು ಮನವಿ

  • Writer: Ananthamurthy m Hegde
    Ananthamurthy m Hegde
  • Dec 6, 2024
  • 1 min read


ಸಿದ್ದಾಪುರ : ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿತ ಮೀನುಗಾರರ ಸೊಸೈಟಿ ರಚನೆಯಲ್ಲಿ ಮೀನು ಮಾರಾಟ ಉದ್ಯೋಗವನ್ನು ಮಾಡುತ್ತಿರುವ ಎಲ್ಲಾ ಸಮುದಾಯದವರಿಗೆ ಅವಕಾಶವನ್ನು ಕಲ್ಪಿಸಬೇಕೆಂದು ಮೀನು ಮಾರಾಟಗಾರರ ವಿಶ್ವಸ್ಥ ಮಂಡಳಿ ಆಗ್ರಹಿಸಿದೆ. ಈ ಕುರಿತು ತಹಸೀಲ್ದಾರ ಕಚೇರಿಗೆ ತೆರಳಿ ಮಂಡಳಿಯ ಪದಾಧಿಕಾರಿಗಳು ಮನವಿ ಸಲಿಸಿದ್ದಾರೆ.

ತಾಲೂಕಿನ ಪಟ್ಟಣ ಪಂಚಾಯತ ಮಳಿಗೆಯಲ್ಲಿ ಬಹಳ ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದು, ಮೀನುಗಾರಿಕೆಯನ್ನು ಅಲವಂಬಿಸಿ ಎಲ್ಲಾ ಸಮುದಾಯದ ಜನರು ಜೀವನ ನಡೆಸುತ್ತಿದ್ದೇವೆ.

ಆದರೆ ಈಗ ಸಿದ್ದಾಪುರ ತಾಲೂಕಿನಲ್ಲಿ ಮೀನುಗಾರಿಕೆ ಸೊಸೈಟಿಯನ್ನು ಪ್ರಾರಂಭ ಮಾಡಲು ಹೊರಟಿರುವುದು ಸಂತೋಷದ ವಿಷಯ. ಆದರೆ ಮೀನುಗಾರಿಕೆಯನ್ನು ನಂಬಿ ಉದ್ಯೋಗ ಮಾಡುವ ಎಲ್ಲಾ ಸಮುದಾಯದ ಜನರಿಗೆ ಸರಕಾರದಿಂದ ಬರುವ ಸವಲತ್ತುಗಳು ಹಾಗೂ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಬೇಕು ಹಾಗೂ ಆಡಳಿತ ಮಂಡಳಿ ರಚನೆಯ ಸಂದರ್ಭದಲ್ಲಿ ನಮ್ಮ ಪರಿಗಣಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ತಹಸೀಲ್ದಾರ ಎಂ.ಆರ್. ಕುಲಕರ್ಣಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಿದ್ದಾಪುರ ಮೀನು ಮಾರುಕಟ್ಟೆಯ ಪದಾಧಿಕಾರಿಗಳಾದ ಸುನೀಲ್ ಎಂ. ಫರ್ನಾಂಢೀಸ್, ಬಾಪು ಬುಡನ್ ಸಾಬ್, ಮಹೇಶ ಮಹಾಲೆ, ಗಂಗಾಧರ ಚಲುವಾದಿ, ಹೇಮಗರಿ, ಶರೀಪ್, ಅಬ್ಜಲ್, ರಾಮ ನಾಯ್ಕ, ಮೀರಾ ಮೇಸ್ತ, ಅಂತೋನ್ ಫರ್ನಾಂಡಿಸ್, ವಿನಾಯಕ, ಬಾಷಾ ಮುಂತಾದವರು ಉಪಸ್ಥಿತರಿದ್ದರು.

Comments


Top Stories

bottom of page