ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ಗುರುಪ್ರಸಾದ್
- Ananthamurthy m Hegde
- Nov 4, 2024
- 1 min read

ಕಾರವಾರ: ಚಲನಚಿತ್ರ ನಿರ್ದೇಶಕ ಗುರು ಪ್ರಸಾದ್ ಮಾನಸಿಕ ಖಿನ್ನತೆಯಲ್ಲಿ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಮಾನಸಿಕ ಖಿನ್ನತೆಗೊಳಗಾಗಿ ಬೀದಿ ಸುತ್ತುತಿದ್ದ ವ್ಯಕ್ತಿಯನ್ನು ಸಿನಿಮಾ ಚಿತ್ರೀಕರಣದ ವೇಳೆ ನೋಡಿದ್ದ ಅವರು ಆತನಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆ ತೊಡಿಸಿ ತನ್ನ ಸಿನಿಮಾ ಕಾಯಕಕ್ಕೆ ಬಳಸಿಕೊಳ್ಳುವ ಜೊತೆ ಖಿನ್ನತೆಗೊಳಗಾಗಿದ್ದ ವ್ಯಕ್ತಿಗೆ ಧೈರ್ಯ ತುಂಬಿ ಮಾನವೀಯತೆ ಮೆರೆದಿದ್ದರು. ಹೌದು ೨೦೧೬ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಚಿತ್ರ ನಿರ್ದೇಶನ ಮಾಡಲು ಬಂದಿದ್ದ ಗುರುಪ್ರಸಾದ್ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎನ್ನುವ ಮಾನಸಿಕ ಖಿನ್ನತೆಗೊಳಗಾಗಿ ಉದ್ದನೆಯ ಕೂದಲು ಬಿಟ್ಟು ತಿರುಗುತ್ತಿದ್ದ ವ್ಯಕ್ತಿಯನ್ನು ನೋಡಿ ಮರುಗಿ ಆತನನ್ನು ತನ್ನ ಬಳಿ ಕರೆಸಿಕೊಂಡು ಆತನಿಗೆ ಕಟಿಂಗ್ ಮಾಡಿಸಿ ಹೊಸ ಬಟ್ಟೆ ತೊಡಿಸಿದ್ದರು. ಇದಲ್ಲದೇ ಚಿತ್ರ ನಿರ್ದೇಶನದ ವೇಳೆ ಆತನನ್ನು ಕೆಲಸ ಮಾಡಲು ಬಳಸಿಕೊಂಡಿದ್ದರು. ನಂತರ ಆತನಿಗೆ ಧೈರ್ಯ ತುಂಬಿ ದುಡಿಮೆಯ ಹಾದಿ ತೋರಿಸಿದ್ದರು.
Commentaires