ಮಿರ್ಜಾನ್ ನಿಲ್ದಾಣದಲ್ಲಿ ರೈಲ್ವೆ ನಿಲುಗಡೆ ಕೋರಿ ಮನವಿ
- Ananthamurthy m Hegde
- Jun 12
- 1 min read
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್‌ನಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣವು ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದರು ಸಹ ಯಾವುದೇ ರೀತಿಯ ರೈಲ್ವೆ ನಿಲುಗಡೆ ಇಲ್ಲದೆ ಸಾರ್ವಜನಿಕರು ರೈಲ್ವೆಗಾಗಿ ಕುಮಟಾಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಡಗಾಂವ ಮತ್ತು ಮಂಗಳೂರು ಮಾರ್ಗವಾಗಿ ದಿನನಿತ್ಯ ಬೆಳಗಿನ ಜಾವ ೫:೩೦ ಸಂಚರಿಸುವ ಮ್ಯಾಮೋ ರೈಲ್ವೆ ಮಿರ್ಜಾನ್ ಸ್ಟೇಷನ್‌ನನಿಲುಗಡೆ ಮಾಡುವ ವಿಚಾರವಾಗಿ ಸ್ಥಳೀಯರು ಅನೇಕ ಬಾರಿ ಸಂಬAಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಇರುತ್ತದೆ. ಜಿಲ್ಲೆಯ ಜನರು ಸಾಕಷ್ಟು ಭೂಮಿಯನ್ನ ಕೊಂಕಣ ರೈಲ್ವೆಗೆ ನೀಡಿದ್ದು ಪ್ರಯೋಜನವಾಗಿಲ್ಲ ಸ್ಥಳೀಯ ರೈಲ್ವೆ ಮಿರ್ಜಾನ್ ಸುತ್ತಮುತ್ತಲಿನ ಸಾಕಷ್ಟು ಜನರು ದಿನನಿತ್ಯ ವಿಶೇಷವಾಗಿ ಆರೋಗ್ಯ ವಿಚಾರವಾಗಿ ಕುಂದಾಪುರ ಉಡುಪಿ, ಮಂಗಳೂರಿಗೆ ಹೋಗುತ್ತಿರುತ್ತಾರೆ. ಆದರೆ ರೈಲ್ವೆ ಈ ನಿಲ್ದಾಣದಲ್ಲಿ ನಿಲುಗಡೆ ಇಲ್ಲದ ಕಾರಣ ಮುಸುಕಿನ ಕುಮಟಾ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಆದರೆ ಬೆಳಗಿನ ಜಾವ ಯಾವುದೇ ಕುಮಟಕ್ಕೆ ಬಸ್ ಸೌಕರ್ಯ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ವಿಶೇಷವಾಗಿ ಬಡವರಿಗೆ ರೈಲ್ವೆ ನಿಲುಗಡೆ ರೈಲ್ವೆ ಮಿರ್ಜಾನ್ ಸ್ಟೇಷನ್ ಇದ್ದರೆ ಅನುಕೂಲ ಆಗುತ್ತದೆ ದಯವಿಟ್ಟು ಈ ಕೂಡಲೇ ಕೊಂಕಣ ರೈಲ್ವೆ ಅಧಿಕಾರಿಗಳು ಇಲ್ಲಿಯ ಸ್ಥಳೀಯರು ಸಾಕಷ್ಟು ಭೂಮಿಯನ್ನು ರೈಲ್ವೆಗಾಗಿ ತ್ಯಾಗ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಮಡಗಾವ್ ಮಂಗಳೂರು ರೈಲ್ವೆ ಯನ್ನು ನಿಲುಗಡೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಗೆ ಕರೆ ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಪಾಂಡು ಪಟಗಾರ ವಾಸು ಅಂಬಿಗ ಕಲಿಲ್ ಸಾಬ್ ಶ್ರೀಧರ ಅಂಬಿಗ ಚಂದ್ರಾಸ್ ನಾಯ್ಕ ಗಣೇಶ್ ನಾಯ್ಕ್ ಶುಭಾಷ್ ಅಂಬಿಗ ಸಂಕೇತ ನಾಯ್ಕ್ ಈಶ್ವರ್ ಪಟಗಾರ ಚಂದ್ರುಪಟಗಾರ ಗಣಪತಿ ಗೌಡ ವಿನಾಯಕ್ ನಾಯ್ಕ್ ಇತರರು ಇದ್ದರು. ಮನವಿಯನ್ನ ಸ್ಟೇಷನ್ ಅಧಿಕಾರಿಗಳಾದ ಗೌರೀಶ್ ಪಟಗಾರ ಸ್ವೀಕರಿಸಿದರು.
Comments