top of page

ಮುರುಡೇಶ್ವರ ಕಡಲ ತೀರ ಪ್ರವಾಸಕ್ಕೆ ಮುಕ್ತ

  • Writer: Ananthamurthy m Hegde
    Ananthamurthy m Hegde
  • Dec 25, 2024
  • 1 min read

ಕಡಲ ತೀರದಲ್ಲಿ ಮುನ್ನೆಚ್ಚರಿಕೆ ಕ್ರಮ

ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದ್ದ ಮುರುಡೇಶ್ವರ ಕಡಲ ತೀರ ಇದೀಗ ಪ್ರವಾಸಿಗರಿಗೆ ಮುಕ್ತವಾಗಲು ಸಿದ್ದವಾಗುತ್ತಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಕೋಲಾರದ ಮುಳಬಾಗಿಲಿನಿಂದ ಪ್ರವಾಸಕ್ಕೆ ಬಂದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಯಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಇದಾದ ಬಳಿ ಉತ್ತರ ಕನ್ನಡ ಜಿಲ್ಲಾಡಳಿತ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹಾಕಿತ್ತು.ಇದರಿಂದಾಗಿ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ನಿರಾಶೆಯಿಂದ ವಾಪಸ್ ಆಗುವಂತಾಗಿತ್ತು.

ಇದೀಗ ಕ್ರಿಸ್‌ಮಸ್ ಹಾಗೂ ಇಯರ್ ಎಂಡ್ ಇರುವ ಕಾರಣಕ್ಕೆ ರಾಜ್ಯ ಸೇರಿದಂತೆ ದೇಶದ ನಾನಾ ಕಡೆಯಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದಾರೆ. ಇದೀಗ ಮುರುಡೇಶ್ವರ ಕಡಲ ತೀರಕ್ಕೆ ಬರುವ ಪ್ರಾಸಿಗರಿಗೆ ನಿರ್ಧಿಷ್ಟ ಸ್ಥಳಗಳನ್ನ ಗುರುತಿಸಿ ಪ್ರವಾಸಿಗರಿಗೆ ಕಡಲತೀರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲು ಜಿಲ್ಲಾಡಳಿತ ತಿರ್ಮಾನಿಸಿದ್ದು. ಮುನ್ನೆಚ್ಚರಿಕೆ ಕ್ರಮವಾಗಿ ಕಡಲ ತೀರದಲ್ಲಿ ಸಿದ್ಧತೆ ನಡೆಯುತ್ತಿದೆ.

Comments


Top Stories

bottom of page