ಮುರುಡೇಶ್ವರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿಕೆಶಿ
- Ananthamurthy m Hegde
- Nov 21, 2024
- 1 min read
ಭಟ್ಕಳ: ವಿಶ್ವ ಮೀನುಗಾರಿಕೆ ದಿನಾಚರಣೆ ಹಿನ್ನೆಲೆಯಲ್ಲಿ ಕೊಲ್ಲುರಿನಿಂದ ಹೆಲಿಪ್ಯಾಡ್ ಮುಖಾಂತರ ಮುರುಡೇಶ್ವರ ಆರ್. ಎನ್. ಎಸ್. ಗಾಲ್ಫ್ ರೆಸಾರ್ಟ್ಗೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರನ್ನು ಸಚಿವ ಮಂಕಾಳ್ ಎಸ್ ವೈದ್ಯ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.
ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿದ ಅವರು ದೇವರ ದರ್ಶನ ಪಡೆದು ಬಳಿಕ ಅಲ್ಲಿಂದ ನೇರವಾಗಿ ಮುರುಡೇಶ್ವರ ಆರ್. ಎನ್. ಎಸ್. ಗಾಲ್ಫ್ ರೆಸಾರ್ಟ್ಗೆ ಆಗಮಿಸಿದ್ದಾರೆ. ಬಳಿಕ ಅಲ್ಲಿಂದ ಇಡುಗುಂಜಿ ದೇವಸ್ಥಾನ ತೆರಳಿ ದೇವರ ದರ್ಶನ ಪಡೆದು ಪುನಃ ಆರ್. ಎನ್. ಎಸ್. ಗಾಲ್ಫ್ ರೆಸಾರ್ಟ್ ಗೆ ಆಗಮಿಸಿ ನಂತರ ಅಲ್ಲಿ ವಿಶ್ವ ಮೀನುಗಾರಿಕೆ ದಿನಾಚರಣೆ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Comments