ಮಕ್ಕಳ ಮೈ ಮನ ಪುಳಕಗೊಳಿಸಿದ "ರೇನಿ ಡೇ"
- Ananthamurthy m Hegde
- Jun 28
- 1 min read

ಕುಮಟಾ : ಬಹು ಸಂಭ್ರಮದಿಂದ ಬಣ್ಣದ ಬಟ್ಟೆ ಧರಿಸಿ, ಮಳೆಯಲ್ಲಿ ಛತ್ರಿ ಹಿಡಿದು ಕೇಕೆ ಹಾಕುತ್ತಾ, ಮೈ ಮನ ಪುಳಕವಾಗುವಂತೆ ಮಕ್ಕಳು ನರ್ತಿಸಿ, ಸಂಭ್ರಮಿಸಿ ಗಮನ ಸೆಳೆದರು. ಜಲಚಕ್ರದ ಪರಿಷಯದ ಜೊತೆಗೆ ನೀರಿನ ಸಂರಕ್ಷಣೆಯೂ ಸೇರಿದಂತೆ ವಿಶೇಷ ಅಂಶಗಳನ್ನು ವಿಭಿನ್ನವಾಗಿ ಮಕ್ಕಳ ಮನ ತಲುಪುವಂತೆ ಮಾಡುವ ಪ್ರಯತ್ನವಾಗಿ ತಾಲೂಕಿನ ಕೊಂಕಣಿ ಎಜುಕೇಶನ್ ಸರಸ್ವತಿ ವಿದ್ಯಾ ಕೇಂದ್ರದ ಪುಟಾಣಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ "ರೇನಿ ಡೇ" ಎಲ್ಲರ ಮೆಚ್ಚುಗೆ ಪಾತ್ರವಾಯಿತು.
ಪರಿಸರದ ನೈಸರ್ಗಿಕ ವ್ಯವಸ್ಥೆಯ ಬಗ್ಗೆ ತಿಳಿಸುವ, ಮಾನವನ ಬದುಕಿಗೆ ಅಗತ್ಯವಾದ ಜಲಚಕ್ರದ ಮೂಲಭೂತ ಕಲ್ಪನೆಯ ಬಗ್ಗೆ ತಿಳಿಸಿಕೊಡುವ ವಿನೂತನ ಪ್ರಯೋಗವಾಗಿ ಈ ಕಾರ್ಯಕ್ರಮವನ್ನು ಸಂಸ್ಥೆಯವರು ರೂಪಿಸಿದ್ದರು.
ವಿದ್ಯಾರ್ಥಿಗಳಿಗಾಗಿ ಮಳೆಯಲ್ಲಿ ರೈನ್ ಡ್ಯಾನ್ಸ್ ಸಂಯೋಜಿಸಲಾಗಿತ್ತು. ಸಹಜವಾಗಿ ಮಳೆ ಆ ಸಮಯದಲ್ಲಿ ಸುರಿಯದ ಕಾರಣದಿಂದಾಗಿ, ವಿದ್ಯಾರ್ಥಿಗಳ ಉತ್ಸಾಹವನ್ನು ಕಂಡ ಶಿಕ್ಷಕರು ಕೃತಕ ಮಳೆ ಸುರಿಯುವಂತೆ ವ್ಯವಸ್ಥೆ ಮಾಡಿದರು. ಮಳೆಯ ಜೊತೆ ಜೊತೆಗೇ, ಹಾಡಿನ ತಾಳಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಛತ್ರಿ ಹಿಡಿದು ಹೆಜ್ಜೆ ಹಾಕಿದರು. 1 ಹಾಗೂ 2 ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಮಾಡುತ್ತಿದ್ದರೆ ಉಳಿದ ವಿದ್ಯಾರ್ಥಿಗಳು ಅದನ್ನು ಕಂಡು ಸಂಭ್ರಮಿಸಿದರು.
Comments