top of page

ಮಗನ ಸಮಾಧಿ ಮುಂದೆ ತಂದೆ ಕಣ್ಣೀರು ; ಸಿಎಂ, ಡಿಸಿಎಂ ರಾಜೀನಾಮೆ ನೀಡುವಂತೆ ಆಗ್ರಹ

  • Writer: Ananthamurthy m Hegde
    Ananthamurthy m Hegde
  • Jun 7
  • 1 min read
ree

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನಪ್ಪಿದ್ದಾರೆ. ಆರ್​​ಸಿಬಿ ಕಪ್ ಗೆದ್ದ ವಿಜಯೋತ್ಸವಕ್ಕೆ ಬಂದವರು ಹೆಣವಾಗಿದ್ದಾರೆ. ಇದರಲ್ಲಿ ಹಾಸನದ ಭೂಮಿಕ್​ ಕೂಡ ಒಬ್ಬರು. ಆರ್​​ಸಿಬಿ ತಂಡವನ್ನು ನೋಡಲು ಹೋಗಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಭೂಮಿಕ್ ತಂದೆ ಮಗನನ್ನು ನೆನೆದು ಮಗನ ಸಮಾಧಿ ಮುಂದೆಯೇ ಕಣ್ಣೀರಾಕುತ್ತಿದ್ದಾರೆ. ಈ ಪರಿಸ್ಥಿತಿ ಯಾವ ತಂದೆಗೂ ಬರಬಾರದು, ಇದಕ್ಕೆ ಸಿಎಂ, ಡಿಸಿಎಂ ಇಬ್ಬರೇ ನೇರ ಹೊಣೆ, ಅವರು ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ. ಕುಪ್ಪಗೋಡಿನಲ್ಲಿರುವ ಮಗ ಭೂಮಿಕ್ ಸಮಾಧಿ ಮುಂದೆಯೇ ತಂದೆ ಕಣ್ಣೀರಾಕುತ್ತಿದ್ದಾರೆ. ಈ‌ ಪರಿಸ್ಥಿತಿ ಯಾವ ತಂದೆಗೂ ಬರಬಾರದು ಎಂದು ಗೋಳಾಡುತ್ತಿದ್ದಾರೆ. ಇದ್ದೊಬ್ಬ ಮಗನನ್ನು‌ ಕಳೆದುಕೊಂಡು ಕುಟುಂಬದ ರೋಧನೆ ಹೆಚ್ಚಾಗಿದೆ. ಮಗ ಭೂಮಿಕ್​​ ಸಮಾಧಿ ಮೇಲೆಯೇ ಬಿದ್ದು ತಂದೆ ಲಕ್ಷ್ಮಣ್​​ ಗೋಳಾಡುತ್ತಾ ಸಿಎಂ ಡಿಸಿಎಂ ಮತ್ತು ಗೃಹ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಧಿ ಮೇಲೆಯೇ ಮಲಗಿ ನನ್ನ ಮಗನ ಜೊತೆ ನಾನು ಮಲಗಿದ್ದೇನೆ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಆಕ್ರಂದನ ಹೊರಹಾಕುತ್ತಿದ್ದಾರೆ. ಮತ್ತು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Comments


Top Stories

bottom of page