ಮತ್ತೋರ್ವ ಕ್ರಿಕೆಟಿಗನ ವಿಚ್ಚೇದನ ವದಂತಿ ವೈರಲ್?
- Ananthamurthy m Hegde
- Jan 11
- 1 min read
ಬೆಂಗಳೂರು: ಭಾರತ ತಂಡದ ಸ್ಟಾರ್ ಆಟಗಾರ ಯಜುವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ವಿಚ್ಚೇದನ ಕುರಿತ ವಂದತಿಗಳು ವ್ಯಾಪಕವಾಗಿರುವಂತೆಯೇ ಇತ್ತ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

ಹೌದು, ಟೀಮ್ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿಯೇ ಇನ್ನೂ ಮಾಸಿಲ್ಲ. ಅದಾಗಲೇ ಮತ್ತೋರ್ವ ಕ್ರಿಕೆಟಿಗ ವಿಚ್ಚೇದನ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ. ಅದೂ ಕೂಡ ಕರ್ನಾಟಕ ಮೂಲದ ಆಟಗಾರನದ್ದು ಎಂಬುದು ವಿಶೇಷ.. ಕರ್ನಾಟಕ ಮೂಲದ ಕ್ರಿಕೆಟ್ ತಾರೆ ಕನ್ನಡಿಗ ಮನೀಷ್ ಪಾಂಡೇ ಮತ್ತು ಅವರ ಪತ್ನಿ ಆಶ್ರಿತಾ ಶೆಟ್ಟಿ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಮೂಲಗಳ ಪ್ರಕಾರ ಕ್ರಿಕೆಟಿಗ ಮನೀಶ್ ಪಾಂಡೇ ಮತ್ತು ಅವರ ಪತ್ನಿ ಅಶ್ರಿತಾ ಶೆಟ್ಟಿ ಇನ್ ಸ್ಟಾಗ್ರಾಮ್ ನಲ್ಲಿ ಪರಸ್ಪರರನ್ನು ಅನ್ ಫಾಲೋ ಮಾಡಿಕೊಂಡಿದ್ದು, ಮಾತ್ರವಲ್ಲದೇ ಈ ಹಿಂದೆ ತಾವು ಅಪ್ಲೋಡ್ ಮಾಡಿದ್ದ ತಮ್ಮ ವಿವಾಹದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ 2019ರ ಡಿಸೆಂಬರ್ನಲ್ಲಿ ಶುರುವಾಗಿದ್ದ ದಾಂಪತ್ಯಯಾನ 7 ವರ್ಷಕ್ಕೆ ಅಂತ್ಯದ ಹಾದಿ ಹಿಡಿದಿದೆ ಎನ್ನಲಾಗುತ್ತಿದೆ.
ಕಳೆದ ಕೆಲ ತಿಂಗಳ ಹಿಂದೆಯೇ ಭಿನ್ನಾಭಿಪ್ರಾಯದ ಕಾರಣದಿಂದ ಇಬ್ಬರು ದೂರಾಗಿದ್ದು, ಪ್ರತೇಕವಾಗಿ ಜೀವನ ನಡೆಸುತ್ತಿದ್ದಾರೆ. ಮನೀಷ್ಪಾಂಡೆ ಬೆಂಗಳೂರಿನಲ್ಲಿ ನೆಲೆಸಿದ್ದರೆ, ಅಶ್ರಿತಾ ಶೆಟ್ಟಿ ಮುಂಬೈನಲ್ಲಿ ಬೀಡು ಬಿಟ್ಟುದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಕಳೆದೊಂದು ವರ್ಷದಿಂದ ಸಾರ್ವಜನಿಕವಾಗಿಯೂ ಇಬ್ಬರೂ ಎಲ್ಲೂ ಕಾಣಿಸಿಕೊಂಡಿಲ್ಲ. ಈ ಎಲ್ಲಾ ವಿಚಾರಗಳು ಡಿವೋರ್ಸ್ ಗಾಸಿಪ್ಗೆ ಪುಷ್ಟಿ ನೀಡಿವೆ.
ಅಂದಹಾಗೆ ಮನೀಷ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ವಿವಾಹಿಕ ಜೀವನದ ಕುರಿತು ಕಳೆದ ವರ್ಷವೂ ಇಂತಹುದೇ ಗಾಸಿಪ್ ಹಬ್ಬಿತ್ತು.
ಆದರೆ ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಮನೀಷ್ ಪಾಂಡೆಯಾಗಲಿ ಅಥವಾ ಅವರ ಪತ್ನಿ ಆಶ್ರಿತಾ ಶೆಟ್ಟಿಯಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
Comments