ಮತಗಟ್ಟೆಗೆ ಪ್ರವೇಶಿಸಿ ವಿಡಿಯೋ ಚಿತ್ರೀಕರಣ; ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ
- Ananthamurthy m Hegde
- 7 hours ago
- 1 min read

ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಚುನಾವಣೆಯ ದಿನ ಅಂದರೆ ಕಳೆದ ವರ್ಷ ಮೇ ತಿಂಗಳ 7ನೇ ತಾರೀಖಿನಂದು ಕಾರವಾರ ವಿಧಾನಸಭಾ ಕ್ಷೇತ್ರದ ಸೇಂಟ್ ಮೈಕಲ್ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 107 ರಲ್ಲಿ ಮಾಧ್ಯಮದ ವರದಿಗಾರರು ಮತಗಟ್ಟೆ 107 ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿ ಮತದಾನದ ಗೌಪ್ಯತೆಗೆ ತೊಂದರೆ ನೀಡಿದ ಆರೋಪದ ಮೇಲೆ ಕಾರವಾರದ ಟಿವಿ ಮೀಡಿಯಾ) ಹಾಗೂ ಪತ್ರಿಕಾ ಮಾಧ್ಯಮದ ಕೆಲವು ಪತ್ರಕರ್ತರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತ ಕಾನಿಷ್ಕ್ ಆದೇಶ ನೀಡಿದ್ದಾರೆ.
ಚುನಾವಣಾ ನಿಯಮ 1961ರ ಕಲಂ 49 (ಎಂ) ನ್ನು ಉಲ್ಲಂಘಿಸಿರುವ ಮೂಲಕ ಮತಗಟ್ಟೆಯ ಒಳಗಡೆ ಗೌಪ್ಯತೆ ಕಾಪಾಡಿಕೊಳ್ಳುವ ಹಾಗೂ ಮತಗಟ್ಟೆಯ ನಿಯಮಗಳನ್ನು ಅನುಸರಿಸುವ ಕಾನೂನನ್ನು ಉಲ್ಲಂಘಿಸಿದಕ್ಕಾಗಿ, ಮತಗಟ್ಟೆಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತ ರವರು ಈ ವರದಿಗಾರರ ವಿರುದ್ಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಕಾನೂನು ಪ್ರಕಾರ ದೂರು ಸಲ್ಲಿಸಬೇಕೆಂದು ಶುಕ್ರವಾರ ಆದೇಶಿಸಿದ್ದಾರೆ ಚುನಾವಣೆ ಮುಗಿದ ಒಂದು ವರ್ಷದ ನಂತರ ಈ ದೂರನ್ನು ದಾಖಲಿಸಲು ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತರು ಆದೇಶಿಸಿರುವುದು ಅಚ್ಚರಿಗೆ ಕಾರಣವಾಗಿದೆ.
Comments