ಮದ್ಯದ ಅಮಲಲ್ಲಿ ಕೊಲೆ: ಆರೋಪಿಗಳ ಬಂಧನ
- Ananthamurthy m Hegde
- Oct 29, 2024
- 1 min read

ಕುಮಟಾ: ಉತ್ತರಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಆಸ್ಪತ್ರೆ ಕ್ವಾಟ್ರಸ್ ಬಳಿ ಗಾರೆ ಕೆಲಸಕ್ಕೆ ಬಂದಿದ್ದ ಹುಬ್ಬಳ್ಳಿ ಮೂಲದ ಇಮ್ತಿಯಾಜ್ (೨೫ ) ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಮೌನೇಶ್ ಹಾಗೂ ಸಾಧಿಕ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಕುಮಟಾಕ್ಕೆ ಪಿಎಸ್‌ಐ ಮಯೂರ್ ನೇತೃತ್ವದ ತಂಡ ಕತೆತಂದಿದೆ.
ರವಿವಾರ ಮಧ್ಯ ರಾತ್ರಿ ಸುಮಾರು ೧೨ಗಂಟೆ ಅಂದಾಜಿಗೆ ಒಂದೇ ರೂಮಿನಲ್ಲಿದ್ದ ನಾಲ್ಕು ಜನರು ಮದ್ಯದ ಪಾರ್ಟಿ ಮಾಡಿದ್ದರು. ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ.
ನಾಲ್ವರ ಪೈಕಿ ಮೊಯುದ್ದೀನ್ ಎಂಬಾತ ಊಟ ಮಾಡಿ ನಿದ್ದೆಗೆ ಜಾರಿದ್ದರೆ ಮದ್ಯದ ಅಮಲಿನಲ್ಲಿ ಇಬ್ಬರು ಇಮ್ತಿಯಾಝನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬೆಳಿಗ್ಗೆ ಮೊಯುದ್ದೀನ್ ಎದ್ದು ನೋಡುವಷ್ಟರಲ್ಲಿ ರೂಂ ಮುಂದೆ ಇಮ್ತಿಯಾಜ್ ಹೆಣವಾಗಿ ಬಿದ್ದಿದ್ದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಕೊಲೆ ಮಾಡಿ ಹುಬ್ಬಳ್ಳಿಯತ್ತ ಪರಾರಿಯಾಗಿದ್ದ ಆರೋಪಿಗಳಾದ ಮೌನೇಶ್ ಹಾಗೂ ಸಾಧಿಕ್‌ನನ್ನು ಬಂಧಿಸಲಾಗಿದ್ದು ಘಟನೆಗೆ ನಿಖರ ಕಾರಣ ತಿಳಿಯಬೇಕಿದೆ.
Commentaires