ಮದ್ಯದ ಮತ್ತಲ್ಲಿ ಅಣ್ಣ -ತಮ್ಮರ ಗಲಾಟೆ ಸಾವಿನಲ್ಲಿ ಅಂತ್ಯ
- Ananthamurthy m Hegde
- Dec 4, 2024
- 1 min read

ಹೊನ್ನಾವರ: ಕ್ಷುಲ್ಲಕ ಕಾರಣಕ್ಕೆ ಮದ್ಯ ಸೇವಿಸಿ ಹೊಡೆದಾಡಿಕೊಳ್ಳುತ್ತಿದ್ದ ಸಹೋದರರ ಮದ್ಯದ ಅಮಲು ಹತ್ಯೆಯಲ್ಲಿ ಕೊನೆಗೊಂಡಿದೆ. ಈ ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಿಬೈಲ್ ನ ಹೆಬೈಲನಲ್ಲಿ .
ಮಂಜುನಾಥ ಹನುಮಂತ ನಾಯ್ಕ ಎಂಬಾತನೇ ತನ್ನ ಸಹೋದರ ನಾಗೇಶ್ ನಾಯ್ಕ ನನ್ನು ಹತ್ಯೆಗೈದ ಅಪರಾಧಿ.
ಪ್ರತಿ ದಿನ ಈ ಸಹೋದರರು ಮದ್ಯ ಸೇವಿಸಿ ಒಂದಲ್ಲಾ ಒಂದು ವಿಷಯದಲ್ಲಿ ಗಲಾಟೆ ಮಾಡಿಕೊಂಡು ಹೊಡೆದಾಡಿಕೊಳ್ಳುತಿದ್ದರು. ಆದರೆ ಮಂಗಳವಾರ ರಾತ್ರಿ ಮನೆಯಲ್ಲಿ ಮದ್ಯ ಸೇವಿಸಿ ಮಾತಿಗೆ ಮಾತು ಬೆಳೆಸಿಕೊಂಡ ಸಹೋದರರ ರಂಪಾಟ ಕೊನೆಗೆ ಹತ್ಯೆಯಲ್ಲಿ ಕೊನೆಗೊಂಡಿದೆ.
ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮಂಜುನಾಥ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Recent Posts
See Allಹೊನ್ನಾವರ: ಇಲ್ಲಿನ ಹಡಿನಬಾಳದ ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಕಲಾ ಕೇಂದ್ರ ಕಪ್ಪೆ ಕೆರೆ ವತಿಯಿಂದ ದಿ. ಮಹಾದೇವ ಹೆಗಡೆ ಸಂಸ್ಮರಣೆ ಕಾರ್ಯಕ್ರಮ ಫೆ.೪ ರಂದು ನಡೆಯಲಿದೆ...
Comentários