top of page

ಮದರಸಾಗಳಲ್ಲಿ ಭಾರತದ ವಿರೋಧಿ ಪಾಠ! ಯತ್ನಾಳ್ ಹೇಳಿಕೆ ಕೋಲಾಹಲ

Writer: Ananthamurthy m Hegde
Ananthamurthy m Hegde
Mar 20, 2025
1 min read

ಬೆಂಗಳೂರು: ಮದರಸಾಗಳಲ್ಲಿ ಭಾರತದ ವಿರೋಧಿ ಪಾಠ ಹೇಳಿ ಕೊಡಲಾಗ್ತಿದೆ ಎಂಬ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ಯತ್ನಾಳ್ ಮಾತಿನಿಂದ ಕೆಂಡಾಮಂಡಲರಾದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್, ಯತ್ನಾಳ್ ದೇಶದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದರು

ಮದರಸಾಗಳಲ್ಲಿ ಭಾರತ ವಿರೋಧಿ ಪಾಠ ಮಾಡಲಾಗ್ತಿದೆ ಎಂದು ಹೇಳಿಕೆ ಕೊಟ್ಟ ಯತ್ನಾಳ್ ಕ್ಷಮೆ ಕೇಳಬೇಕು ಹಾಗೂ ಕಡತದಿಂದ ಯತ್ನಾಳ್ ಹೇಳಿಕೆಯನ್ನು ತೆಗೆಯಬೇಕು ಎಂದು ರಿಜ್ವಾನ್ ಅರ್ಷದ್ ಆಗ್ರಹಿಸಿದರು.

ಮದರಸಾಗಳಲ್ಲಿ ಭಾರತದ ವಿರೋಧಿ ಪಾಠ:

ಬಜೆಟ್ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಯತ್ನಾಳ್, 'ಬಜೆಟ್ ನಲ್ಲಿ 9 ಪೇಜ್ ಅಲ್ಪಸಂಖ್ಯಾತರಿಗೆ ಇದೆ. ನೂರು ಉರ್ದು ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಹಿಂದಿ ಬೋರ್ಡ್ ಬರೆದರೆ ಕನ್ನಡ ಸಂಘಟನೆಗಳು ಅಳಿಸುತ್ತಾರೆ. ಕನ್ನಡ ಕಲಿಯಬೇಕಲ್ವಾ? ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಜೊತೆ ಔಪಚಾರಿಕ ಶಿಕ್ಷಣಕ್ಕೆ ಒತ್ತು ಕೊಡಲು ಅನುದಾನ ಕೊಡಲಾಗಿದೆ‌. ಆದರೆ, ಮದರಸಾಗಳಲ್ಲಿ ಭಾರತದ ವಿರುದ್ಧ ಕಲಿಸಲಾಗುತ್ತಿದೆ' ಎಂದು ಯತ್ನಾಳ್ ಆರೋಪಿಸಿದರು.

ಇದಕ್ಕೆ ರಿಜ್ವಾನ್ ಅರ್ಷದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ಏನ್ರೀ ಮಾತನಾಡ್ತಿದ್ದೀರಿ, ಭಾರತದ ವಿರುದ್ಧ ಅಂದ್ರೆ ಏನು. ಬಾಯಿಗೆ ಬಂದ ಹಾಗೆ ಮಾತನಾಡ್ತೀರಾ? ಸುಮ್ಮನೆ ಇರ್ರೀ' ಎಂದು ರಿಜ್ವಾನ್ ಕೆಂಡಾಮಂಡಲಾದರು.

'ಸಮಾಜಕ್ಕೆ ಬೆಂಕಿ ಹಚ್ಚುತ್ತೀರಾ, ನೀವು ಭಾರತದ ವಿರೋಧಿಗಳು'

ಹಿರಿಯರು ಎಂದು ಮರ್ಯಾದೆ ಕೊಟ್ಟರೆ ನಿಮಗೆ ಮಾನ ಮರ್ಯಾದೆ ಇಲ್ವಾ? ಯಾವ ಮದಸರಾದಲ್ಲಿ ಭಾರತ ವಿರೋಧಿ ಚಟುವಟಿಕೆ ಕಲಿಸ್ತಾರೆ. ಸಮಾಜಕ್ಕೆ ಬೆಂಕಿ ಹಚ್ಚುತ್ತೀರಾ, ನೀವು ಭಾರತದ ವಿರೋಧಿಗಳು. ಯತ್ನಾಳ್ ದೇಶದ್ರೋಹಿ ಎಂದು ರಿಜ್ವಾನ್ ಕೆಂಡಾಮಂಡಲರಾದರು.

ದೇಶದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದೀರಿ. ದೇಶ ದ್ರೋಹಿಗೆ ಮಾತನಾಡಲು ಏಕೆ ಅವಕಾಶ ಕೊಡ್ತೀರಿ ಎಂದು ಕಿಡಿಕಾರಿದರು. ಕಡತದಿಂದ ತೆಗೆಯುವಂತೆ ಆಗ್ರಹ ಅಲ್ಲದೆ ಅಮಾನತು ಮಾಡುವಂತೆ ಆಗ್ರಹಿಸಿದರು.

ಯತ್ನಾಳ್ ಟಿಪ್ಪು ಜಯಂತಿ ಆಚರಿಸಿದ್ದರು

ಜನತಾ ದಳದಲ್ಲಿ ಇದ್ದಾಗ ಯತ್ನಾಳ್ ಟಿಪ್ಪು ಸುಲ್ತಾನ್ ಜಯಂತಿ ಮಾಡಿದ್ದಾರೆ ಎಂದು ಎಂಬಿ ಪಾಟೀಲ್ ಆರೋಪಿಸಿದರು. ಯತ್ನಾಳ್ ಮಾತಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪದ ಇದ್ದರೆ ಕಡತದಿಂದ ತೆಗೆದು ಹಾಕುವಂತೆ ಸೂಚಿಸಿದರು.

Comments


Top Stories

1/322
bottom of page