ಮನೆ ಅಂಗಳದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನ
- Ananthamurthy m Hegde
- Nov 6, 2024
- 1 min read

ಯಲ್ಲಾಪುರ: ತಾಲೂಕಿನ ಮಾದೇವಕೊಪ್ಪದಲ್ಲಿ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಬೈಕನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದೆ. ಮಾದೇವಕೊಪ್ಪದಲ್ಲಿ ಬೆಂಡು ಜನ್ನು ಪಾಂಡ್ರಮೀಸೆ ಬೈಕ್ ತಮ್ಮ ಮನೆಯ ಅಂಗಳದಲ್ಲಿ ರಾತ್ರಿ ನಿಲ್ಲಿಸಿದ್ದರು. ಬೆಳಗಾಗುವಷ್ಟರಲ್ಲಿ ದುಷ್ಕರ್ಮಿಗಳು ಬೈಕು ಕದ್ದು ಪರಾರಿಯಾಗಿದ್ದಾರೆ. ಕಪ್ಪು ಬಣ್ಣದ ಹೀರೋ ಸ್ಪೆ÷್ಲಂಡರ್ ಪ್ಲಸ್ ಕಳ್ಳತನವಾದ ಬೈಕ್ ಆಗಿದ್ದು ಕಳ್ಳರನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
Comentários