ಮನಾಲಿಯಲ್ಲಿ ಭಾರೀ ಹಿಮಪಾತ

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸೋಮವಾರ ಭಾರೀ ಹಿಮಪಾತವಾಗಿದೆ . ಪ್ರವಾಸಿಗರ ಕಣ್ಣಿಗೆ ಸ್ವರ್ಗವನ್ನು ನೋಡಿದಂತಾಗಿದೆ . 1,000 ವಾಹನಗಳು ಸುಮಾರು ಗಂಟೆಗಳ ಕಾಲ ರೋಹ್ಟಾಂಗ್‌ನ ಸೊಲಾಂಗ್ ಮತ್ತು ಅಟಲ್ ಸುರಂಗದ ನಡುವೆ ಸಿಲುಕಿಕೊಂಡರು. ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 700 ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಹಿಮಪಾತವು ಮುಂದುವರಿದಂತೆ ತಮ್ಮ ವಾಹನಗಳನ್ನು ತೆರವು ಮಾಡಲು ಪ್ರಯಾಣಿಕರು ಮತ್ತು ಚಾಲಕರಿಗೆ ಪೋಲೀಸ್ ಸಿಬ್ಬಂದಿ ಸಹಾಯ ಮಾಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಸಹ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಹಿಮದಿಂದ ಆವೃತವಾದ ಪರ್ವತಗಳಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಈ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ .
ಹಿಮದಿಂದ ಆವೃತವಾದ ಪರ್ವತಗಳನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಡಿಸೆಂಬರ್‌ನಿಂದ ಫೆಬ್ರವರಿಯ ಚಳಿಗಾಲದ ದಿನಗಳಲ್ಲಿ ಈ ಪ್ರದೇಶಕ್ಕೆ ಬರುತ್ತಾರೆ. ಆದರೆ ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತು, ರಸ್ತೆ ಜಾಮ್ನಿಂದ ಪ್ರವಾಸಿಗರನ್ನು ರಕ್ಷಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ.










Comments