ಮಲೆನಾಡ ಮಿತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಉಚಿತ ಅಥ್ಲೆಟಿಕ್ ತರಬೇತಿ
- Ananthamurthy m Hegde
- Dec 31, 2024
- 1 min read
ಮಲೆನಾಡ ಮಿತ್ರ ಸ್ಪೋರ್ಟ್ಸ್ ಕ್ಲಬ್ ಸಿದ್ದಾಪುರ ಇವರು ಆಸಕ್ತ ವಿದ್ಯಾರ್ಥಿಗಳಿಗೆ ಕಳೆದ 8 ವಾರಗಳಿಂದ ಉಚಿತ ಅಥ್ಲೆಟಿಕ್ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಹೊಸೂರ್ ನ ಬಂಕೇಶ್ವರ ಹೈ ಸ್ಕೂಲ್ ಕ್ರೀಡಾಂಗಣದಲ್ಲಿ
ವಿದ್ಯಾರ್ಥಿಗಳಿಗೆ ರವಿವಾರ ಕೌಶಲ್ಯ ಸ್ಪರ್ಧೆ ನಡೆಸಿದರು. ಶಿಬಿರದಲ್ಲಿ ಸುಮಾರು 70 ವಿದ್ಯಾರ್ಥಿಗಳು ಪಾಲ್ಗೊಂಡು ತರಬೇತಿ ಪಡೆದರು. ಮತ್ತು ರವಿವಾರ ನಡೆದ ಸ್ಪರ್ಧೆಯಲ್ಲಿ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉದ್ದ ಜಿಗಿತ, ರಿಲೇ, 100 ಮೀಟರ್ ಓಟ 1400 ಮೀಟರ್ ಮ್ಯಾರಥಾನ್ ಓಟ ಸೇರಿದಂತೆ 11 ಬಗೆಯ ಸ್ಪರ್ಧೆಗಳು ನಡೆದವು.
ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಕ್ಕಾಗಿ ಪದಕ ವಿತರಿಸಲಾಯಿತು.
ಮುಖ್ಯ ತರಬೇತುದಾರ ಅನಂತ ತರಬೇತಿ ನೀಡಿದ್ದರು ಕ್ಲಬ್ ನ ಸದಸ್ಯರು ಸಹಾಯ ನೀಡಿದರು ಬಹುಮಾನ ವಿತರಣೆ ಸಂದರ್ಭದಲ್ಲಿ ಸ್ಥಳೀಯ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
Comments