'ಮಳೆ ನಾಡಲ್ಲಿ ಹೂ ಡೇರೆ' ಪುಸ್ತಕ ಲೋಕಾರ್ಪಣೆ
- Ananthamurthy m Hegde
- Jul 2
- 1 min read

ಕುಮಟಾ: ಪ್ರೋ ಟಿ ಜಿ ಭಟ್ಟ ಹಾಸಣಗಿ ಯವರು ರಚಿಸಿದ 'ಮಳೆ ನಾಡಲ್ಲಿ ಹೂ ಡೇರೆ' ಎಂಬ ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮ ತಾಲೂಕಿನ ದೀವಗಿ ಹಾಲಕ್ಕಿ ಸಮುದಾಯ ಸಭಾಭವನದಲ್ಲಿ ನಡೆಯಿತು.
ದೊಡ್ಮನೆ ಜಾನಕಿ ವೆಂಕಟರಮಣ ಶೆಟ್ಟಿ ಪ್ರೌಢಶಾಲೆ ದೀವಗಿ ಹಾಗೂ ಅಭಿನವ ಸಾಂಸ್ಕೃತಿಕ ವೇದಿಕೆ ಕುಮಟಾ ಇದರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ದಿನಕರ ಶೆಟ್ಟಿ ಉದ್ಘಾಟಿಸಿ 'ಮಳೆ ನಾಡಲ್ಲಿ ಹೂ ಡೇರೆ' ಎಂಬ ಪುಸ್ತಕ ಲೋಕಾರ್ಪಣೆ ಗೊಳಿಸಿದರು.
ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕರು ಪ್ರೋ ಟಿ ಜಿ ಭಟ್ಟ ಹಾಸಗಣಿಯವರು ನಾನು ಕಲಿತ ಕಾಲೇಜಿನ ಪ್ರಾಧ್ಯಾಪಕರು ಎನ್ನುವುದು ತುಂಬಾ ಖುಷಿ ಯ ಸಂಗತಿ ಅವರು ಈ ಒಂದು ಸುಂದರ ಹೂವಿನ ಹೆಸರಿನಲ್ಲಿ ಬರೆದ ಪುಸ್ತಕ ತುಂಬಾ ಸೊಗಸಾಗಿದೆ ಪುಸ್ತಕ ಬರೆಯುವುದು ಸುಲಭದ ಕೆಲಸವಲ್ಲ ಅದಕ್ಕಾಗಿ ತುಂಬಾ ತಾಳ್ಮೆ ಸಹನೆ ಬೇಕಾಗುತ್ತದೆ ಅವರು ಉತ್ತಮ ಕವಿಗಳೂ ಆಗಿರುವುದರಿಂದ ಇವೆಲ್ಲ ಅವರಿಗೆ ಸುಲಭ ಅವರಿಂದ ಇನ್ನೂ ಅನೇಕ ಉತ್ತಮ ಕೃತಿಗಳು ಹೊರಬರಲಿ ಓದುಗರಿಗೆ ಸಂತಸ ತರಲಿ ಎಂದು ಶುಭ ಹಾರೈಸಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.
ಹೊನ್ನಾವರ ಎಸ್ ಡಿ ಎಂ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೋ ನಾಗರಾಜ ಹೆಗಡೆ (ಅಪಗಾಲ) ಕೃತಿ ಪರಿಚಯವನ್ನು ಅದ್ಭುತವಾಗಿ ವರ್ಣಿಸಿ ಪರಿಚಯಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಪ್ರಮೋದ ನಾಯ್ಕ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರೊ ಟಿ ಜಿ ಭಟ್ಟ ಹಾಸಣಗಿ ರವರು ಅನೇಕ ಕೃತಿ ಗಳನ್ನು ರಚಿಸಿದ್ದು ಕೆಲವೊಂದು ನಾನು ಓದಿದ್ದೇನೆ ತುಂಬಾ ಅರ್ಥಪೂರ್ಣವಾಗಿ ಸುಂದರವಾದ ಸಾಲುಗಳನ್ನು ಹೊಂದಿದವುಗಳಾಗಿವೆ ಎಂದರು. ಮಳೆ ನಾಡಲ್ಲಿ ಹೂ ಡೇರೆ ಈ ಕೃತಿಯಲ್ಲಿ ಸಾಹಿತ್ಯದ ಅನೇಕ ಪ್ರಕಾರಗಳು ಕಾಣಬಹುದು. ಈ ಡೇರೆ ಹೂವು ನೋಡೋಕೆ ತುಂಬಾ ಅಂದ ಚಂದ.. ಶಿರಸಿ ಸಿದ್ದಾಪುರ ಭಾಗದಲ್ಲಿ ಈ ಹೂವನ್ನು ಕಾಣಬಹುದು. ಈ ಹೂವು ಅವನತಿಯ ಹಂತ ತಲುಪಿದ್ದು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಯೂ ಈ ಕೃತಿ ಸಹಕಾರಿ ಎಂದರು. ಪ್ರೋ ಟಿ ಜಿ ಭಟ್ಟ ಹಾಸಣಗಿ ಯವರು ತಾವು ಬರೆದ ಕೃತಿಯ ಬಗ್ಗೆ ಹಾಗೂ ಧಾರ್ಮಿಕ ಆಚಾರ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
Comments