ಮಹಿಳಾ ಐಪಿಎಲ್ ಕಪ್‌ಗೆ ಮುತ್ತಿಟ್ಟ ಮುಂಬೈ ಇಂಡಿಯನ್ಸ್
- Ananthamurthy m Hegde
- Mar 16
- 1 min read
ಪ್ರಸಕ್ತ ಸಾಲಿನ ಮಹಿಳಾ ಪ್ರೀಮಿಯರ್ ಲಿಗ್(ಡಬ್ಲೂಪಿಎಲ್) ಫೈನಲ್ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿದ್ದು, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ನ ಟ್ರೋಫಿ ಕನಸನ್ನು ಭಗ್ನಗೊಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, ಹರ್ಮ್ ಪ್ರೀತ್ ಕೌರ್ ಅವರ ಆಕರ್ಷಕ 66 ರನ್‌ಗಳ ಸಹಾಯದಿಂದ, ನಿಗದಿತ 20 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ನಿಗದಿತ 20 ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 141 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 8 ರನ್‌ಗಳ ರೋಚಕ ಗೆಲುವು ಸಾಧಿಸಿ ಡಬ್ಲೂಪಿಎಲ್ ಟ್ರೋಫಿಗೆ ಮುತ್ತಿಕ್ಕಿತು.
Comments