ಮಹಿಳೆ ಮಾನಭಂಗ ಯತ್ನ ಹಾಗೂ ಹಲ್ಲೆ ಪ್ರಕರಣ : ಆರೋಪಿಗಳಿಗೆ ಜೈಲು
- Ananthamurthy m Hegde
- Nov 6, 2024
- 1 min read

ಸಿದ್ದಾಪುರ: ಮಹಿಳೆ ಮೇಲಿನ ಮಾನಭಂಗ ಯತ್ನ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿತರಿಗೆ ಶಿರಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ೨೦೧೯ರ ಎಲ್.ಐ.ಸಿ ಪಾಲಿಸಿ ಕೇಳುವ ನೆಪದಲ್ಲಿ ಆರೋಪಿತರು ಕಾನಸೂರಿನ ಮಹಿಳೆಯೊಬ್ಬರ ಮನೆಗೆ ನುಗ್ಗಿದ್ದರು. ಮಹಿಳೆ ಬಳಿ ನೀರು ಕೊಡುವಂತೆ ಕೇಳಿ ನೀರು ತರಲು ಮಹಿಳೆ ಹೋದಾಗ ಆಕೆಯ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದರಯ. ವಿಷಯ ತಿಳಿದ ಆಕೆಯ ಪತಿ ನಾಲ್ವರೂ ಆರೋಪಿತರಿಗೆ ಕರೆ ಮಾಡಿ ವಿಚಾರಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಮಹಿಳೆ ಹಾಗೂ ಆಕೆಯ ಪತಿ ಮೇಲೆ ಮಾರಕಸ್ತçಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಆದರೆ ಸಾಕ್ಷಿ ಕೊರತೆ ಕಾರಣದಿಂದ ಕರಿಯಾ ನಾಯ್ಕ್, ದೇವರಾಜ್ ನಾಗ ನಾಯ್ಕ್, ಅಪ್ಪಯ್ಯ ಪುಕೇಶಿ ಕುಟ್ಟನ್ ಹಾಗೂ ಚಂದ್ರಶೇಖರ ನಾಯ್ಕ್ ನಿರ್ದೋಷಿ ಎಂದು ಹೊರಬಂದಿದ್ದರು. ಆದರೆ ಮಹಿಳೆ ಈ ಕುರಿತು ಮೇಲ್ಮನವಿ ಸಲ್ಲಿಸಿದ್ದು ಶಿರಸಿ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕೇಣಿ ಪ್ರಕರಣದ ವಿಚಾರಣೆ ನಡೆಸಿದರು. ಆರೋಪಿತರಿಗೆ ೩ ೩ ವರ್ಷ ಜೈಲು, ಎ೧ ಆರೋಪಿಗೆ ೧೨೦೦೦ ಹಾಗೂ ಉಳಿದ ಆರೋಪಿಗಳಿಗೆ ೧೦,೫೦೦ರೂ ದಂಡ ವಿಧಿಸಲಾಯಿತು. ಮಹಿಳೆಗೆ ೫೦೦೦ ಹಾಗೂ ಆಕೆಯ ಪತಿಗೆ ೪೦೦೦ರೂ ಪರಿಹಾರ ವಿಧಿಸಲಾಯಿತು














Comments