ಯುವಕನ ಮೇಲೆ ಹಲ್ಲೆ : ಇಬ್ಬರ ಬಂಧನ
- Ananthamurthy m Hegde
- Nov 21, 2024
- 1 min read
ಶಿರಸಿ : ಯುವತಿಯೊಂದಿಗೆ ಓಡಾಟ ನಡೆಸಿದ್ದನ್ನು ಆಕ್ಷೇಪಿಸಿ ಕೊರ್ಲಕಟ್ಟಾ ಗ್ರಾಮದ ಗೌಡಕೊಪ್ಪದ ಜಿನದತ್ತ ಜೈನ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಶಿವಾಜಿ ಚೌಕ್ ಬಳಿ ನಡೆದಿದೆ.
ರಾಜೀವ ನಗರದ ಶೇಕ್ ಅಹ್ಮದ್ ಅನ್ವರ್ ಸಾಬ್ ಶೇಕ್, ಮಹಮ್ಮದ್ ಅಬ್ದುಲ್ ಗಫಾರ್ ಕಾಡಗಿ ಮತ್ತು ಗೋಲಗೇರಿ ಓಣಿಯ ಉಬೆದ್ ಇಕ್ಬಾಲ್ ಸವಣೂರ ಹಲ್ಲೆ ನಡೆಸಿದ ದುಷ್ಕರ್ಮಿಗಳು. ಹಲ್ಲೆಗೊಳಗಾದ ವಿರೇಂದ್ರ ಮತ್ತು ಯುವತಿ ಶಿವಾಜಿಚೌಕ ಬಳಿ ಐಸಕ್ರೀಮ್ ತಿನ್ನುತ್ತಿದ್ದ ಸಂದರ್ಭದಲ್ಲಿ ಬಂದ ಆರೋಪಿಗಳು ಮುಸ್ಲಿಂ ಹುಡುಗಿಯನ್ನು ಪ್ರೀತಿಮಾಡುತ್ತೀಯಾ ಎಂದು ಅವಾಚ್ಯ ಶಬ್ದದಿಂದ ಬೈಯ್ದು ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ.















Comments