top of page

ಯಲ್ಲಾಪುರ ವಿವಿಧೆಡೆ ಗಾಳಿ ಸಹಿತ ಭಾರಿ ಮಳೆ

  • Writer: Ananthamurthy m Hegde
    Ananthamurthy m Hegde
  • Feb 22
  • 1 min read


ಯಲ್ಲಾಪುರ: ಯಲ್ಲಾಪುರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಗಾಳಿ ಸಹಿತ ಮಳೆಯಾಗಿದ್ದು, ಇಡಗುಂದಿ, ವಜ್ರಳ್ಳಿ, ಕಳಚೆ ಭಾಗದಲ್ಲಿ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗಿದೆ. ಯಲ್ಲಾಪುರ ಪಟ್ಟಣ, ನಂದೊಳ್ಳಿ, ಮಾಗೋಡ ಭಾಗದಲ್ಲಿ ತುಂತುರು ಮಳೆಯಾಗಿದೆ.

ಅಕಾಲಿಕವಾಗಿ ಬಂದ ಈ ಮಳೆಯಿಂದ ಅಡಕೆ ಬೆಳೆಗಾರರು ಕಂಗಾಲಾಗುವಂತಾಗಿದೆ. ಒಣಗಲು ಹಾಕಿದ ಅಡಿಕೆ ಮಳೆಯಲ್ಲಿ ನೆನೆದು ನಷ್ಟ ಉಂಟಾಗುವ ಭಯದಲ್ಲಿ ಬೆಳೆಗಾರರಿದ್ದಾರೆ.

Comments


Top Stories

bottom of page