ಯಲ್ಲಾಪುರದಲ್ಲಿ ಜೂನ್ ೧ ೦ಕ್ಕೆ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ
- Ananthamurthy m Hegde
- Jun 6
- 1 min read
ಕರ್ನಾಟಕ ಪಂಚಾಯತ್ ರಾಜ್ ಪರಿಷತ,ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ,ಟೀಡ್ ಟ್ರಸ್ಟ್,ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂನ್ 10 ರಂದು ಬೆಳಿಗ್ಗೆ 10.30 ಕ್ಕೆ ಪಟ್ಟಣದ ನಿಸರ್ಗಮನೆಯಲ್ಲಿ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಪಂಚಾಯತ್ ರಾಜ್
ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನ್ನಾಡಿ,ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಂಚಾಯತ್ ರಾಜ್ಯ ಪರಿಷತ್ ಕಾರ್ಯಾಧ್ಯಕ್ಷ ವಿ ವೈ ಘೋರ್ಪಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಪ್ರಸ್ತಾಪಿಸಲಿದ್ದಾರೆ. ಹಣಕಾಸು ಆಯೋಗದ ಅಧ್ಯಕ್ಷ ಸಿ ನಾರಾಯಣ ಸ್ವಾಮಿ ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ಸಬಲೀಕರಣ ಕುರಿತು ಹಾಗೂ ಮಾಜಿ ಶಾಸಕ ಡಿ ಆರ್ ಪಾಟೀಲ್ ಸಧೃಢ ಗ್ರಾಮಸಭೆಗಳ ಮೂಲಕ ಗ್ರಾಮ ಸ್ವರಾಜ್ ಸಾಕಾರ ಕುರಿತು ಉಪನ್ಯಾಸ ನೀಡಲಿದ್ದಾರೆ. ಟೀಡ್ ಟ್ರಸ್ಟ್ ಮಾನೇಜಿಂಗ್ ಟ್ರಸ್ಟಿ ಮೋಹಿನಿ ಪೂಜಾರಿ,ಪಂಚಾಯತ್ ರಾಜ್ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸತೀಶ ಕಾಡಶೆಟ್ಟಿಹಳ್ಳಿ ಕೋಶಾಧ್ಯಕ್ಷ ಚಿಕ್ಕೊಮಾರಿಗೌಡ,ಪಿಡಿಓ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಬಿ ಕೆ ಭಾಗವಹಿಸುತ್ತಾರೆ. ಪಂಚಾಯತರಾಜ್ ಸಬಲೀಕರಣ ದಿನಾಚರಣೆ ಕಾರ್ಯಕ್ರಮಕ್ಕೆ ನಿಸರ್ಗಮನೆಯಲ್ಲಿ ವಿಶೇಷ ಸಿದ್ದತೆ ಮಾಡಲಾಗಿದೆ. ಹಳ್ಳಿಗಳ ಚಿತ್ರಕಥೆ,ಹಳ್ಳಿ ಬದುಕಿನ ದೂರು ದುಮ್ಮಾನುಗಳ ಸಾಕಾರ,ಗ್ರಾಮ ಸರಕಾರ ಅಂತ್ಯೋದಯ ಕಲ್ಪನೆ,ಗಾಂಧಿ ಪರ್ಣ ಕುಟೀರ,ಗ್ರಾಮ ಸ್ವರಾಜ್ ಪಂಚಾಯತಿ ಕಟ್ಟೆ,ಜನರ ಯೋಜನೆಗಳು,ನಮ್ಮ ಪ್ರಜಾ ಪ್ರಭುತ್ವ,ಗಾಂಧಿ ಗ್ರಾಮ ಸ್ವರಾಜ್ ಕಲ್ಪನೆ ಮೂಡಿಸುವ ರೀತಿಯಲ್ಲಿ ಸ್ಲೋಗನ್,ಚಿತ್ರಗಳು ಮೂಲಕ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ವಿಶೇಷ ರೀತಿಯಲ್ಲಿ ಸಿದ್ದತೆಗಳು ಭರದಿಂದ ಸಾಗಿದ್ದು,ಅರ್ಥಪೂರ್ಣವಾಗಿ ಸಂಯೋಜಿಸಲಾಗಿದೆ ಎಂದರು.ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ ಕೆ ಭಟ್ಟ ಯಡಳ್ಳಿ ಇದ್ದರು.












Comments