ರಾಜ್ಯಕ್ಕೂ ಎಂಟ್ರಿ ಕೊಟ್ಟ ಮಂಗನಬಾವು ಸೋಂಕು : ಮಂಡಗೋಡಿನಲ್ಲಿ120 ವಿದ್ಯಾಥಿಗಳಿಗೆ ಸೋಂಕು
- Ananthamurthy m Hegde
- Nov 23, 2024
- 1 min read
ಮುಂಡಗೋಡ: ಇತ್ತೀಚೆಗೆ ಕೇರಳ ರಾಜ್ಯದಲ್ಲಿ ಸದ್ದು ಮಾಡಿದ್ದ ಮಂಗನಬಾವು ಸೋಂಕು ಇದೀಗ ಉತ್ತರ ಕನ್ನಡ ಜಿಲ್ಲೆಗೂ ಆವರಿಸಿದ್ದು ಒಂದೇ ವಾರದಲ್ಲಿ 120 ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ .
ಇತ್ತೀಚೆಗೆ ಕೇರಳದಲ್ಲಿ ಮಂಗನಬಾಹು ಸೋಂಕಿನಿಂದ 15 ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ ವೃದ್ಧರು ಸೋಂಕಿತರಾಗಿದ್ದರು. ಇದರ ಬೆನ್ನಲ್ಲೇ ಮಂಗನ ಕಾಯಿಲೆ ರೋಗದಿಂದ ತತ್ತರಿಸಿ ಕಳೆದ ಕೆಲವು ದಿನಗಳಿಂದ ರಿಲೀಫ್ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಈಗ ಮಂಗನಬಾವು ಸೋಂಕು ಕಾಡತೊಡಗಿದೆ. ಒಹುತೇಕ ಮಕ್ಕಳಲ್ಲೇ ಕಂಡುಬರುವ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಬೇಗ ಹರಡುತ್ತಿದೆ. ತಾಲೂಕಿನ ಇಂದಿರಾಗಾAಧಿ ವಸತಿ ನಿಲಯ ಶಾಲೆಯಲ್ಲಿ ನವೆಂಬರ್ 16ಕ್ಕೆ ಐದು ಮಕ್ಕಳಲ್ಲಿ ಜ್ವರ, ಶೀತ ಹಾಗೂ ಗಂಟಲ್ ನೋವು ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಆಗ ಮಂಗನಬಾವು ರೋಗ ಇರುವುದು ದೃಢ ಪಟ್ಟಿದೆ. ರೋಗ ಕಾಣಿಸಿಕೊಂಡ ಮಕ್ಕಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದರೆ ಮಂಗನಬಾವು ವೈರಲ್ ಸೋಂಕು ಆಗಿರುವುದರಿಂದ ಕೇವಲ ಐದು ದಿನದಲ್ಲಿ 120ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನಬಾವು ಕಾಣಿಸಿಕೊಂಡಿದೆ. ಅನೇಕ ಮಕ್ಕಳು ತಿವ್ರವಾದ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದು ಕೆಲವರು ವಸತಿ ನಿಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿರಾಗಾಂಧಿ ವಸತಿ ನಿಯದಲ್ಲಿ ಒಟ್ಟು 210 ವಿದ್ಯಾರ್ಥಿಗಳಿದ್ದು , ರೋಗ ವೇಗವಾಗಿ ವ್ಯಾಪಿಸುತ್ತಿರುವುದರಿಂದ ಸದ್ಯಕ್ಕೆ ಪಾಲಕರನ್ನ ಕರೆಸಿ ಮಕ್ಕಳನ್ನು ಮನೆಗೆ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತಿದೆ . ಬೇರೆ ವಿದ್ಯಾರ್ಥಿನಿಲಯದಲ್ಲೂ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ, ಸೋಂಕು ಹೆಚ್ಚಾದ್ದರಿಂದ ಮೂರು ದಿನ ಮುಂಡಗೋಡಿನ ಇಂದಿರಾಗಾAಧಿ ವಸತಿನಿಲಯದ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ಸದ್ಯ ಕೇರಳಕ್ಕೆ ಸೀಮಿತವಾಗಿದ್ದ ಮಂಗನಬಾವು ಸೋಂಕು ಇದೀಗ ಉತ್ತರ ಕನ್ನಡ ಜಿಲ್ಲೆಗೂ ಆವರಿಸಿದ್ದು, ಅತೀ ವೇಗದಲ್ಲಿ ಮಕ್ಕಳನ್ನು ಆವರಿಸುತ್ತಿದೆ. ಹೀಗಾಗಿ ಜಿಲ್ಲಾಡಳಿತ ಸಹ ಕಠಿಣ ಕ್ರಮಕ್ಕೆ ಮುಂದಾಗಿದ್ದು ರೋಗ ಬಾಧಿತ ಮಕ್ಕಳನ್ನು ಐಸೋಲೇಷನ್ ಮಾಡುವ ಜೊತೆಗೆ ಸ್ಥಳೀಯ ಗ್ರಾಮಪಂಚಾಯ್ತಿ ಮಟ್ಟದಲ್ಲೂ ಮಕ್ಕಳ ಮೇಲೆ ನಿಗಾ ಇಡಲು ಸೂಚಿಸಿದೆ.















Comments