ರೈತನಿಗೆ ಪರಿಹಾರ ನೀಡದ ತಾಲೂಕು ಆಡಳಿತ: ಎಸಿ ಕಚೇರಿ ಜಪ್ತಿಗೆ ಆದೇಶ
- Ananthamurthy m Hegde
- Nov 6, 2024
- 1 min read
ಕುಮಟಾ: ತಾಲೂಕಿನ ಎಸಿ ಕಚೇರಿ ಜಪ್ತಿ ಮಾಡುವಂತೆ ಕುಮಟಾ ಜೆಎಮ್‌ಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ. ಕುಡಿಯುವ ನೀರಿನ ಯೋಜನೆಗಾಗಿ ಅಂಕೋಲಾ-ಗೋಕರ್ಣ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರೈತ ಉದಯ್ ಬಾಳಗಿ ಎಂಬುವವರ ನಾಲ್ಕು ಗುಂಟೆ ಜಾಗವನ್ನು ಪಡೆದ ತಾಲೂಕು ಆಡಳಿತ ಪರಿಹಾರ ನೀಡದೇ ನಿರ್ಲಕ್ಷö್ಯ ಮಾಡಿತ್ತು. ಈ ಕುರಿತಾಗಿ ೨೦೨೨ರಲ್ಲಿ ಕುಮಟಾ ಜೆಎಮ್‌ಎಫ್‌ಸಿ ಕೋರ್ಟ್ನಲ್ಲಿ ಉದಯ್ ದಾವೆ ಹೂಡಿದ್ದರು. ೧೦,೫೮,೨೯೫ರೂ ಪರಿಹಾರವನ್ನು ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಆದಾಗ್ಯೂ ಕೋರ್ಟ್ ಆದೇಶವನ್ನೂ ತಾಲೂಕು ಆಡಳಿತ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಎಸಿ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಸೇರಿದಂತೆ ಇಡೀ ಕಚೇರಿ ಜಪ್ತಿಗೆ ಆದೇಶ ನೀಡಲಾಗಿದೆ.
Comments