ರೈತರಿಗೆ ತಲೆನೋವಾದ ಕಾಡಾನೆ ದಾಳಿ
- Ananthamurthy m Hegde
- Nov 8, 2024
- 1 min read
ಸಿದ್ದಾಪುರ : ತಾಲೂಕಿನಲ್ಲಿ ಹೊಲ ಗದ್ದೆಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಕಾಡಾನೆಗಳ ದಾಳಿ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಕಾನಸೂರು ನಾಣಿಕಟ್ಟಾ ಶೇಲೂರು ಕಲ್ಕಟ್ಟೆ ಕೊಡ್ಸರ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಆನೆಗಳು ಕಾಣಿಸಿಕೊಳ್ಳುತ್ತಿವೆ. ಗದ್ದೆಗಳನ್ನು ತುಳಿದು ಬೆಳೆ ನಾಶ ಪಡಿಸಿವೆ. ಆನೆಗಳನ್ನು ಓಡಿಸಲು ರೈತರು ಹರ ಸಾಹಸ ಪಡುತ್ತಿದ್ದಾರೆ. ಮಂಗಗಳು, ಕಾಡುಕೋಣ, ಕಾಡು ಹಂದಿ, ನವಿಲುಗಳು ಬೆಳೆ ನಾಶ ಮಾಡಿದರೆ ಕನಿಷ್ಠ ಬೆಳೆಯಾದರೂ ಉಳಿಯುತಿತ್ತು. ಆದರೆ ಕಾಡಾನೆ ದಾಳಿ ಮಾಡಿದರೆ ಎಲ್ಲ ನಾಶವಾಗುತ್ತದೆ. ರೈತರು ವರ್ಷವಿಡಈ ಬೆವರು ಸುರಿಸಿ ಬೆಳೆದ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹ.














Comments