top of page

ಲಂಬಾಪುರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತಕೇಂದ್ರ ಸರಕಾರದ ಜವಾಬ್ದಾರಿಯುತ ನಡೆಯಿಂದ ಅಡಿಕೆ ಬೆಲೆ ಸ್ಥಿರ

  • Writer: Ananthamurthy m Hegde
    Ananthamurthy m Hegde
  • Nov 24, 2024
  • 1 min read



ಸಿದ್ದಾಪುರ : ಅಡಿಕೆ ಕದ್ದು ಬರುವುದರಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ ಆಗಿದೆ ಹೊರತು ಹೊರದೇಶದಿಂದ ಅಧಿಕೃತವಾಗಿ ಅಡಿಕೆ ಬರುವಂತ ಕಾರಣದಿಂದಲ್ಲ, ವಿದೇಶದಿಂದ ಅಡಿಕೆ ಕದ್ದು ಬರದಂತೆ ಬಿಗುವಿನ ಕ್ರಮ ಕೈಗೊಂಡಿದ್ದೇವೆ ಆದರೂ ಕೂಡ ಕದ್ದು ಅಡಿಕೆ ಬರುತ್ತಿದೆ, ಅಡಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯುತ ಮತ್ತು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದೆ ಹಾಗಾಗಿ ಅಡಿಕೆ ದರ ಕಳೆದ ಹತ್ತು ವರ್ಷದಿಂದ ಸ್ಥಿರವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಶನಿವಾರ ತಾಲೂಕಿನ ಲಂಬಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೇವಾ ಸಹಕಾರಿ ಸಂಘದ ಕಟ್ಟಡದ ಸಭಾಂಗಣ ಉದ್ಘಾಟಿಸಿ ಮಾತನಾಡಿದರು. ಅರಣ್ಯ ಅತಿಕ್ರಮಣ, ಕಸ್ತೂರಿರಂಗನ್ ವರದಿಯಿಂದ ಯಾವುದೇ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಂಡು ಈಗಿರುವ ಸ್ಥಿತಿಗಿಂತಲೂ ಉತ್ತಮವಾಗಿ ಜೀವನ ನಡೆಸಲು ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ ಎಂದರು.

ನೂತನ ಕಟ್ಟಡ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ ನಮಗೆ ಕಾಲಕಾಲಕ್ಕೆ ಬೇಕಾದ ಸವಲತ್ತುಗಳನ್ನು ಸಂಘದಿAದ ಪಡೆಯುವ ಮುಖಾಂತರ ನಮ್ಮ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ನಾವು ಬೆಳೆದ ಬೆಳೆಗಳನ್ನು ಸಂಘದ ಮುಖಾಂತರ ವ್ಯಾಪಾರ ವ್ಯವಹಾರ ನಡೆಸಿದಾಗ ಸಂಘದ ಬೆಳವಣಿಗೆ ಜೊತೆಗೆ ನಮಗೂ ಕೂಡ ಸಹಕಾರ ಆಗುತ್ತದೆ. ಸಂಘ ಸಂಸ್ಥೆ ವಿಚಾರದಲ್ಲಿ ರಾಜಕೀಯವನ್ನು ತರಬಾರದು ಎಂದ ಅವರು ಸಂಘದ ಸ್ಥಾಪನೆಗೆ ಕಾರಣರಾದ ಹಿರಿಯರನ್ನು ಸ್ಮರಿಸಿದರು.

ಕ್ಷೇತ್ರದ ಸಮಸ್ಯೆಯಾದ ಅರಣ್ಯ ಅತಿಕ್ರಮಣ, ಕಸ್ತೂರಿರಂಗನ್ ವರದಿ, ಎಲೆ ಚುಕ್ಕೆ ರೋಗ ಬ ಕರಾಬ್ ಸಮಸ್ಯೆ ಕುರಿತು ಸದನದಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ ಎಂದು ಸಂಸದರಲ್ಲಿ ಈ ವೇಳೆ ಕೇಳಿಕೊಂಡರು.

Comments


Top Stories

bottom of page