ಲಾರಿ, ಬೈಕ್ ನಡುವೆ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು
- Ananthamurthy m Hegde
- Nov 25, 2024
- 1 min read
ಯಲ್ಲಾಪುರ: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಮಹಿಳೆ ಮೃತಪಟ್ಡ ಘಟನೆ ಭಾನುವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಪಟ್ಟಣದ ನಾಯಕನಕೆರೆ ಬಳಿ ನಡೆದಿದೆ.
ಮಾವಿನಮನೆಯ ಶಾರದಾ ಗೌಡ (32) ಮೃತ ಮಹಿಳೆ. ಬೈಕ್ ಸವಾರ ರವಿ ಗೌಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಲ್ಲಾಪುರದ ವಾರದ ಸಂತೆಗೆ ಬಂದಿದ್ದ ಇವರು ಬೈಕ್ ಮೇಲೆ ಊರಿಗೆ ಮರಳುವಾಗ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಗುದ್ದಿದ ಪರಿಣಾಮ ರವಿ ಗೌಡ ಬೈಕ್ ನಿಂದ ದೂರ ಸಿಡಿದು ಬಿದ್ದಿದ್ದು, ಶಾರದಾ ಅವರ ಮೇಲೆ ಲಾರಿಯ ಚಕ್ರ ಹಾದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ರವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.












Comments