ವಿದ್ಯುತ್ ವೈಯರ್ ತಗುಲಿ ಮಹಿಳೆಯ ಸ್ಥಿತಿ ಗಂಭೀರ
- Ananthamurthy m Hegde
- Dec 24, 2024
- 1 min read

ಶಾಲಾ ಬಸ್ಗೆ ಮಗನನ್ನು ಹತ್ತಿಸುವಾಗಿ ವಿದ್ಯುತ್ ವೈಯರ್ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿಯ ಮೋಹನ್ ಲಾಡ್ಜ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಸೋಮವಾರ ಘಟನೆ ನಡೆದಿದೆ. ಮಹಿಳೆಗೆ ಕರೆಂಟ್ ಶಾಕ್ ಹೊಡೆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಗೆ ಕರೆಂಟ್ ಶಾಕ್ ಹೊಡೆದು ಕೈ, ಕಾಲು, ಹೊಟ್ಟೆ ಭಾಗ ಸುಟ್ಟುಹೋಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಮಹಿಳೆಗೆ ಕರೆಂಟ್ ಶಾಕ್ ಹೊಡೆಯುತ್ತಿದ್ದ ವೇಳೆ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿಗೂ ವಿದ್ಯುತ್ ಶಾಕ್ ತಗುಲಿದೆ. ಮಗನನ್ನು ಶಾಲಾ ಬಸ್ ಹತ್ತಿಸುತ್ತಿರುವಾಗ ಮೊದಲು ಬಾಲಕನಿಗೆ ವಿದ್ಯತ್ ತಗುಲಿದೆ, ನಂತರ ಮಗನ ಕೈ ಹಿಡಿದಿದ್ದ ತಾಯಿ ಭಾಗ್ಯಶ್ರಿಗೆ ವಿದ್ಯುತ್ ಶಾಕ್ ತಗುಲಿದೆ. ಕರೆಂಟ್ ಶಾಕ್ ಹೊಡೆಯುತ್ತಿದ್ದಂತೆ ಭಾಗ್ಯಶ್ರೀ ಕುಸಿದು ಬಿದ್ದಿದ್ದಾರೆ. ಬಳಿಕ ಪಟಾಕಿ ಸುಟ್ಟಂತೆ ಭಾಗ್ಯಶ್ರೀ ಕೈ, ಕಾಲು, ಹೊಟ್ಟೆ ಭಾಗ ಸುಟ್ಟುಹೋಗಿದೆ. ನೋಡ ನೋಡುತ್ತಿದ್ದಂತೆ ವಿದ್ಯುತ್ ಶಾಕ್ ಹೊಡೆದು ರಸ್ತೆಯಲ್ಲಿ ಬಿದ್ದು ಭಾಗ್ಯಶ್ರೀ ನರಳಾಡಿದ್ದು, ಆಕೆಯ ಮಗ ಆಯುಷ್ಗೂ ಕೂಡ ವಿದ್ಯುತ್ ಶಾಕ್ ನಿಂದ ಗಂಭೀರ ಗಾಯವಾಗಿದೆ.
ಬುದ್ದಿಮಾಂದ್ಯ ಮಗನನ್ನ ಶಾಲಾ ಬಸ್ಗೆ ಹತ್ತಿಸುವಾಗ ಭಾಗ್ಯಶ್ರೀಗೆ ವಿದ್ಯುತ್ ತಗುಲಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ 11 ಬುದ್ದಿಮಾಂದ್ಯ ಮಕ್ಕಳು ಬಚಾವ್ ಆಗಿದ್ದಾರೆ. ಕಲಬುರಗಿ ನಗರದ ಹಮಾಲವಾಡಿ ಬಡಾವಣೆ ನಿವಾಸಿ ಭಾಗ್ಯಶ್ರೀ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಜೆಸ್ಕಾಂ ನಿರ್ಲಕ್ಷ್ಯದಿಂದ ವಿದ್ಯುತ್ ದುರಂತ ಸಂಭವಿಸಿದೆ ಎನ್ನಲಾಗಿದೆ. ಜೋತು ಬಿದ್ದ ವಿದ್ಯುತ್ ವೈಯರ್ ಶಾಲಾ ಬಸ್ ಮೇಲ್ಭಾಗಕ್ಕೆ ತಗುಲಿ ವಿದ್ಯುತ್ ಪಸರಿಸಿದೆ. ಜೆಸ್ಕಾಂ ನಿರ್ಲಕ್ಷ್ಯದಿಂದ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದ್ದು, ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments