ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುತ್ತಿರುವ ಶಿಕ್ಷಕರ ಪಾತ್ರ ಮಹತ್ವದ್ದು
- Ananthamurthy m Hegde
- Nov 10, 2024
- 1 min read
ಸಿದ್ದಾಪುರ: ತಾಲೂಕ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವು ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್ ಮಾತನಾಡಿ ಒಂದು ಕಾರ್ಯಕ್ರಮ ಯಶಸ್ವಿಯಾಗಿ ರೂಪುಗೊಳ್ಳಲು ಅದರ ಹಿಂದೆ ಹಲವರ ಪರಿಶ್ರಮವಿರುತ್ತದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತವು ವಿದ್ಯಾರ್ಥಿಗಳಿಗೆ ಬಹು ಮಖ್ಯವಾಗಿದ್ದು ಈ ಹಂತದಲ್ಲಿ ಮಕ್ಕಳು ಸಾಕಷ್ಟು ಕಲಿಯುತ್ತಾರೆ ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುತ್ತಿರುವ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದ್ದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ವಿನಯ್ ಹೊನ್ನೆಗುಂಡಿ ಇಂದಿನ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಇಲ್ಲಿ ಹಬ್ಬದ ವಾತಾವರಣದಂತೆ ಕಾಣುತ್ತಿದ್ದು ಮಕ್ಕಳಲ್ಲಿ ಉತ್ಸಾಹ ವನ್ನು ನೋಡುತ್ತಿದ್ದೇವೆ.
ಶಿಕ್ಷಕರು ಇಂದಿನ ಮೊಬೈಲ್ ವಾತಾವರಣದಲ್ಲಿ ಮಕ್ಕಳನ್ನು ಸಿದ್ಧಪಡಿಸಿ ಅವರಿಗೆ ಕಲೆ ಸಂಸ್ಕೃತಿಯ ಅರಿವು ಮೂಡಿಸುವಂತಹ ಪ್ರತಿಭಾ ಕಾರಂಜಿ ಅಂತ ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಮೂರು ವಿಭಾಗಗಳಲ್ಲಿ ಸುಮಾರು 428ಕ್ಕೂ ಹೆಚ್ಚು ಸ್ಪರ್ಧಿಗಳು 49 ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಸುಧೀರ್ ನಾಯ್ಕ ಕೊಂಡ್ಲಿ, ರವಿಕುಮಾರ್ ನಾಯ್ಕ,
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಹೆಚ್ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ ವಿ ನಾಯ್ಕ, ಪ್ರಾ.ಶಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಮಾ.ಶಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್ ನಾಯ್ಕ, ಪ್ರೌ.ಶಿ.ಸಂಘದ ಅಧ್ಯಕ್ಷ ಟಿ ಕೆ ನಾಯ್ಕ, ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷರಾದ ಎಮ್ ಆರ್ ಮುಖ್ಯೋಪಾಧ್ಯಾಯನೀಯರಾದ ಸುಲೋಚನಾ ಹಾಗೂ ಶಾರದಾ, ಪ್ರಾ.ಶಾ.ಶಿ. ಸಂಘದ ಮಂಜುಳಾ ಪಟಗಾರ್ ಮತ್ತು ಬಸವರಾಜ ಕಡಪಟ್ಟಿ, ಕರ್ನಾಟಕ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಗೋಪಾಲ್ ನಾಯ್ಕ ಬಾಶಿ, ಶಿಕ್ಷಣ ಅಧಿಕಾರಿ ಚೈತನ್ಯ ಕುಮಾರ್ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.














Comments