ವಿದ್ಯಾರ್ಥಿಯನ್ನು ಥಳಿಸಿ ನಡುದಾರಿಯಲ್ಲಿ ಇಳಿಸಿದ ನಿರ್ವಾಹಕ
- Ananthamurthy m Hegde
- Nov 8, 2024
- 1 min read
ಸಿದ್ದಾಪುರ : ಶಾಲೆಗೆ ತೆರಳಲು ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ ವಿದ್ಯಾರ್ಥಿಯನ್ನು ಬಸ್ ನಿರ್ವಾಹಕ ಮಧ್ಯ ದಾರಿಯಲ್ಲಿ ಥಳಿಸಿ ಬಸ್ಸಿನಿಂದ ಕೆಳಕ್ಕೆ ಇಳಿಸಿ ಮಧ್ಯ ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪಾಲಕರು ಸಿದ್ದಾಪುರದ ಬಸ್ ನಿಲ್ದಾಣದ ಬಳಿ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ ಘಟನೆ ನಡೆದಿದೆ.
೮ನೇ ತರಗತಿ ವಿದ್ಯಾರ್ಥಿ ಮದನ ಲೋಕೇಶ ನಾಯ್ಕ ಮುಂಡಗೆತಗ್ಗಿAದ ಸಿದ್ದಾಪುರಕ್ಕೆ ಬಂದು ಅಲ್ಲಿಂದ ಶಿರವಂತೆ ಶಾಲೆಗೆ ತೆರಳಲು ಶಿರಸಿ ಸಿದ್ದಾಪುರ ಸಾಗರ ಬಸ್ ಹತ್ತಿದ್ದನು. ಆದರೆ ಅದ್ಯಾವ ಕಾರಣಕ್ಕೊ ಗೊತ್ತಿಲ್ಲ ಮಾನವೀಯತೆ ತೋರದ ಚಾಲಕ ನಿರ್ವಾಹಕರು ವಿದ್ಯಾರ್ಥಿಯನ್ನು ಅರೆಂದೂರ್ ಹತ್ತಿರ ಥಳಿಸಿ ಹೊರಗೆ ದಬ್ಬಿರುವದಾಗಿ ವಿದ್ಯಾರ್ಥಿಯ ಪಾಲಕರು ತಿಳಿಸಿದ್ದಾರೆ. ಸಿಬ್ಬಂದಿಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಶಾಲೆಗೆ ಹೋಗಲು ಮನಸ್ಸಿಲ್ಲದ ವಿದ್ಯಾರ್ಥಿ ತಾನೇ ರಸ್ತೆ ಮಧ್ಯದಲ್ಲಿ ಇಳಿದು ಮನೆಯವರು ನಿಜ ಹೇಳಿದರೆ ಬೈಯುತ್ತಾರೆ ಎಂದು ಸಿಬ್ಬಂದಿ ಮೇಲೆ ಆರೋಪಿಸಿದ್ದಾರೆ ಎನ್ನುವ ಮಾಹಿತಿ ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ.
Comments